ಪುತ್ತೂರು: ಕೋಲಾಡಿ ಶಾಂತಿನಿವಾಸದ ವೆಂಕಪ್ಪ ಕರ್ಕೇರ ಮತ್ತು ಶಾಂತಮ್ಮ ದಂಪತಿಗಳು ವೈವಾಹಿಕ ಜೀವನದ 60ವರುಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಸಂತೋಷ ಕೂಟವನ್ನು ಮೇ.13ರಂದು ಏರ್ಪಡಿಸಲಾಗಿತ್ತು.

60ವರ್ಷಗಳ ಏಳು ಬೀಳುಗಳ ನಡುವಿನ ಸುಮಧುರ ದಾಂಪತ್ಯ ಜೀವನವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಿದ ಕುಟುಂಬ ವರ್ಗ ಕಾರ್ಯಕ್ರಮವನ್ನು ನೆನಪಿನ ಮೈಲುಗಲ್ಲಾಗಿಸಿತು. ವೈವಾಹಿಕ ಜೀವನದ ವಜ್ರ ಮಹೋತ್ಸವ ಎನ್ನಲಾದ ಈ ಕಾರ್ಯಕ್ರಮ ದಂಪತಿಗಳ ಪ್ರೀತಿ, ಬದ್ದತೆ, ಮತ್ತು ಅನುಭವಗಳ ಹಂಚಿಕೆಗೆ ವೇದಿಕೆಯಾಯಿತು. ಸುಶಾಂತ್ ಆಚಾರ್ಯ ಮತ್ತು ಪ್ರತೀಕ್ಷಾ ಸುಶಾಂತ್ ಅವರ ಗಾಯತ್ರಿ ಮ್ಯೂಸಿಕ್ಸ್ ಈ ಹೃದಯಶ್ಪರ್ಷಿ ಕಾರ್ಯಕ್ರಮದಲ್ಲಿ ನವಿರಾದ ಹಾಡುಗಳ ಮೂಲಕ ರಂಗೇರಿಸಿದರೆ, ದೀಕ್ಷಿತ್ ಅಂಡಿಂಜೆ ಮತ್ತು ಸುಪ್ರಿತಾ ಚರಣ್ ಕೋಡಿಂಬಾಳ ನಿರೂಪಣೆಯ ಮೂಲಕ ಔತಣಕೂಟಕ್ಕೆ ಮೆರುಗು ನೀಡಿದರು.ಕೆ ಎಸ್ ಆರ್ ಟಿ ಸಿ ಸಂಚಾರ ನಿಯಂತ್ರಣಾಧಿಕಾರಿ ಕೋಚಣ್ಣ ಪೂಜಾರಿ ದಂಪತಿಗಳ ಮತ್ತು ಕುಟುಂಬದ ಪರಿಚಯವನ್ನು ಸಭೆಗೆ ನೀಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,ಕಾರ್ಯನಿರ್ವಹಣಾಧಿಕಾರಿ ಉದಯ ಬಂಗೇರ, ಪ್ರವೀಣ್ ಕುಮಾರ್ ಕೆಡೆಂಜಿ, ಸಿಬಾರ ಜಯರಾಮ ಕೆದಿಲಾಯ,ಶ್ರೀವತ್ಸ ಕೆದಿಲಾಯ, ಶಂಕರ್ ನಾರಾಯಣ ರಾವ್, ನಿಹಾಲ್ ಶೆಟ್ಟಿ, ಚಂದ್ರಶೇಖರ ಕಲ್ಲಗುಡ್ಡೆ,ಕೈಪಂಗಳ ದರ್ಖಾಸು ಕೆ ಎಸ್ ಚಂದ್ರಶೇಖರ್,ನೆಕ್ಕಿಲು ನರಿಮೊಗರು ಗಂಗಾಧರ ಸುವರ್ಣ, ನರಿಮೊಗರು ಸುವರ್ಣ ಎಸ್ಟೇಟ್ ನ ವೇದನಾಥ ಸುವರ್ಣ, ಬನ್ನೂರು ಉಮೇಶ್ ಶೆಟ್ಟಿ, ಕೊಡ್ನೀರು ಮಂಡತ್ತೋಡಿ ಸೀತರಾಮ ಗೌಡ, ಜೆರಮ್ ಮಸ್ಕರೇನಿಯಸ್ ದರ್ಬೆ, ಕೃಷ್ಣಶರ್ಮ ಗೊಳಿತ್ತಡಿ, ಪಡ್ಪು ಪರಮಾರ್ಗ ಸಂಜೀವ ಪೂಜಾರಿ, ಅರುಣಾ, ದಿನೇಶ್ ಕರ್ಕೇರ ಕೋಲಾಡಿ,ಆಶಿಕಾ, ಆಯುಷ್, ಆಶ್ಲೇಷ್, ಹರಿಣಿ ಚೆನ್ನಪ್ಪ ಪೂಜಾರಿ ಪಾಣಂಬು,ಶ್ರೀದೇವಿ ವಿಜೇತ್, ದಿಶಾ ಹರ್ಷಿತ್, ಮಾಲತಿ ಕೇಶವ ಎಂಡೆಸಾಗು,ರಂಜಿತಾ ಅಭಿಲಾಷ್, ಅಖಿಲೇಶ್, ಅಧೀಕ್ಷ,ಮಮತಾ ಜಿನ್ನಪ್ಪ ಪೂಜಾರಿ ಆಲಂಕಾರು,ರಂಜನ್, ರಚನಾ, ಮಲ್ಲಿಕಾ ವಿಶ್ವನಾಥ ಪೂಜಾರಿ ಕೆಡೆಂಜಿ, ಮನೀಷ್, ಅನುಷ್,ಚಂದ್ರಿಕಾ ಶಿವಪ್ಪ ಪೂಜಾರಿ ಕಾನನ, ಇಂಚರ,ಕುಟುಂಬ ವರ್ಗ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.