ಪ್ರಥಮದರ್ಜೆಯೊಂದಿಗೆ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡ ಅಂಬಿಕಾವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳು

0

ಪುತ್ತೂರು: ಸಿ.ಬಿ.ಎಸ್.ಇ ನಡೆಸಿದ 2024-25ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದ್ದು, ಪುತ್ತೂರಿನ ಅಂಬಿಕಾ ವಿದ್ಯಾಲಯ ಸತತ ಮೂರನೆಯ ಬಾರಿ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ಈ ಪರೀಕ್ಷೆಯಲ್ಲಿ 48% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 52% ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ನಿಯತಿ ಭಟ್ (ಪ್ರವೀಣ ಡಿ ಮತ್ತು ಶ್ರೀಮತಿ ಚಿತ್ಕಲ ಗೌರಿ ಇವರ ಪುತ್ರಿ) 95.17% ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಹಿತಾಲಿ ಪಿ ಶೆಟ್ಟಿ(ಪಿ ಎನ್ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಪ್ರತಿಮಾ ಪಿ ಶೆಟ್ಟಿ ಇವರ ಪುತ್ರಿ) 94.17 ಶೇಕಡಾ ದೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ಚಿರಂಜೀವಿ ಅದ್ವೈತ ಕೃಷ್ಣ ಬಿ ( ಅನಂತನಾರಾಯಣ ಬಿ ಮತ್ತು ಶಂಕರಿ ಬಿ ಇವರ ಪುತ್ರ) 94 ಶೇಕಡ ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here