ಪುತ್ತೂರು: ವಿಟ್ಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ವೃತ್ತಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು 10ನೇ ತರಗತಿ ಪಾಸಾದ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎರಡು ವರ್ಷದ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ರೆಫ್ರಿಜರೇಶನ್, ಆಂಡ್ ಏರ್ ಕಂಡೀಷನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಸಿ.ಎನ್.ಸಿ ಮೆಷಿನಿಂಗ್ ಟೆಕ್ನಷಿಯನ್ ಹಾಗೂ ವರ್‍ಚುವಲ್ ಎನಾಲಿಸಸ್ ಆಂಡ್ ಡಿಸೈನರ್ (ಫಿನಿಟ್ ಎಲಿಮೆಂಟ್ ಮೆಥಡ್) ವೃತ್ತಿಗಳು ಹಾಗೂ ಒಂದು ವರ್ಷದ ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್(ಕೋಪಾ),ಇಂಡಸ್ಟ್ರಿಯಲ್ ರೋಬೋಟಿಕ್ಸ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಷಿಯನ್,ಮ್ಯಾನುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಆಂಡ್ ಅಟೋಮೇಶನ್ ಟೆಕ್ನಿಷಿಯನ್ ಹಾಗೂ ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ವೃತ್ತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ www.cite.karnataka.govt.in ರಲ್ಲಿ ನೇರವಾಗಿ/ಹತ್ತಿರದ ಸೈಬರ್ ಕೆಫೆಗಳ ಮೂಲಕ ಅಥವಾ ಸಂಸ್ಥೆಗೆ ಬಂದು ಉಚಿತವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ ಕಚೇರಿ,08255-200092 ಅಥವಾ ಪ್ರಾಚಾರ್ಯರ ಮೊಬೈಲ್ 9449242456 ನಂಬರನ್ನು ಸಂಪರ್ಕಿಸುಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.