ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿಸೈನಿಕರ ಶ್ರೇಯಸ್ಸಿಗೆ ವಿಶೇಷ ಪ್ರಾರ್ಥನೆ

0

ನಮ್ಮ ದೇಶ ಕಾಯುವ ಯೋಧರನ್ನು ಗೌರವಿಸುವ ಕೆಸಲವಾಗಬೇಕು: ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು

ಯುವಕರು ಸದಾ ದೇಶಸೇವೆಗೆ ಸಿದ್ದರಾಗಬೇಕು: ದೇಜಪ್ಪ ಪೂಜಾರಿ

ಇಲ್ಲಿ ನಡೆದಿರುವುದು ಒಂದು ಮಾದರಿ ಕಾರ್ಯಕ್ರಮ: ಆರತಿ

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರದ ವಾರದ ಭಜನಾ ಕಾರ್ಯಕ್ರಮದಲ್ಲಿ ದೇಶವನ್ನು ಕಾಯುವ ಸೈನಿಕರ ಶ್ರೇಯಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಮಿತಿಯ ಗೌರವ ಸಲಹೆಗಾರರಾದ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತುರವರು ಪ್ರಸ್ತಾವಿಕ ಮಾತುಗಳನ್ನಾಡಿ ಒಬ್ಬ ಯೋಧನು ತನ್ನ ಪ್ರಾಣ ತ್ಯಜಿಸಿದರು ಅವನ ಆತ್ಮ ಸದಾ ಕಾಲ ಭಾರತದ ಭೂಮಿಯಲ್ಲಿ ತ್ರೀವರ್ಣ ಧ್ವಜದ ಅಡಿಯಲ್ಲಿ ಜೀವಂತವಾಗಿರುತ್ತದೆ. ನಮಗಾಗಿ ತಮ್ಮ ಕುಟುಂಬವನ್ನು ತ್ಯಜಿಸಿ ದೇಶ ಕಾಯುವ ಪ್ರತಿಯೊಬ್ಬ ಸೈನಿಕನನ್ನು ಗೌರವಿಸಬೇಕು ಅವರ ಶ್ರೇಯಸ್ಸಿಗೆ ಮಾಡುವ ಭಜನಾ ಸೇವೆ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಕಮಾಂಡರ್ ದೇಜಪ್ಪ ಪೂಜಾರಿಯವರು ಮಾತನಾಡಿ ಸಿಂಹ ಹೃದಯ, ಕಠಿಣ ಶಿಸ್ತು, ಅಸಾಧ್ಯ ಮನುಷ್ಯತ್ವ , ದೇಶ ಪ್ರೇಮ ಇದನ್ನು ‌ಒಪ್ಪಿಕೊಳ್ಳುವ ಸಾಮರ್ಥ್ಯವಿದ್ದರೆ ಮಾತ್ರ ಯೋಧನಾಗಬೇಕಂಬ ಕನಸು ನಿಜವಾಗುವುದು. ಸೈನಿಕನಾಗುವುದೆಂದರೆ ವೇಷಧಾರನಿಯ ವಿಷಯವಲ್ಲ, ಅದು ಬಲಿದಾನಕ್ಕೂ ಸಿದ್ದರಾಗಿರುವುದೆಂದು ಎಂಬರ್ಥ. ಯುವಕರು ದೇಶ ಸೇವೆಗೆ ಸದಾ ಸಿದ್ದರಾಗಿ ಈ‌ ಭೂಮಿಯನ್ನು ರಕ್ಷಿಸುಸುವುದೆ ಒಂದು‌ ಪುಣ್ಯದ ಕೆಲಸ ‌ದೇಶ ಸೇವೆಗೆ ಯಾವುದೆ ಜಾತಿ ‌ಇಲ್ಲ‌ ಅಲ್ಲಿ‌ ಕಾಣುವುದು‌ ಮನುಷ್ಯ ‌ಜಾತಿ‌‌ ಒಂದೇ ‌ಸೈನಿಕರಿಗೆ ಎಲ್ಲಾ ದೇವಾಲಯ ಈ‌ ಮಾತೃ ಭೂಮಿ ಅದನ್ನು ಕಾಪಾಡುವ ಜವಾಬ್ದಾರಿ ನಮ್ಮದು‌‌ ಎಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ ಮುಖ್ಯಶಿಕ್ಷಕಿ ಆರತಿ ರವರು ಮಾತನಾಡಿ ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರಗಳನ್ನು ಉಳಿಸುವುದೆ ಇಂತಹ ಭಜನಾ ಮಂದಿರಗಳಲ್ಲಿ ಇಂದು ದೇಶ ಕಾಯುವ ಯೋಧರ ಶ್ರೆಯೋಭಿವೃದ್ದಿಗೆ ಭಜನಾ ಸೇವೆ ಮಾಡಿದ್ದೀರಿ, ಇದು ಒಂದು ಮಾದರಿ‌ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಮಾಡಿ ಮುಂದಿನ ಮಕ್ಕಳಿಗೆ ‌ದೇಶ ಸೇವೆ ಮಾಡಲು ನಾವು ಪ್ರೇರಣೆ ನೀಡಬೇಕು ಎಂದು ಹೇಳಿದರು. ನಿವೃತ್ತ ಯೋಧರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಜನಾ ಮಂಡಳಿಯ ಅದ್ಯಕ್ಷರಾದ ‌ಕೃಷ್ಣ ಕಿಶೋರ್ ಭಟ್ ಸ್ವಾಗತಿಸಿ, ಭಜನಾ ಮಂಡಳಿಯ ‌ಉಪಾಧ್ಯಕ್ಷರಾದ ಉದಯ್ ಕುಲಾಲ್ ವಂದಿಸಿದರು. ಸುಧೀರ್ ನಾಯ್ಕ‌್ ಕೆಮನಾಜೆ ಮತ್ತು ಭಾಸ್ಕರ್ ರೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here