ಕಾಣಿಯೂರು: ಕಾಣಿಯೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಬೆಳಂದೂರು ಗ್ರಾಮದ ಅಬೀರ ರೋಹಿಣಿ ಸುವರ್ಣ ಅಬೀರ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.
1990ರಲ್ಲಿ ಭಕ್ತಕೋಡಿ ಅಂಗನವಾಡಿ ಕೇಂದ್ರಕ್ಕೆ ಕರ್ತವ್ಯಕ್ಕೆ ಹಾಜರಾಗಿ, 13 ವರ್ಷ ಸೇವೆ ಸಲ್ಲಿಸಿ, 2003ರಲ್ಲಿ ಕಾಣಿಯೂರು ಅಂಗನವಾಡಿ ಕೇಂದ್ರಕ್ಕೆ ಕರ್ತವ್ಯಕ್ಕೆ ಹಾಜರಾಗಿ ಸುದೀರ್ಘ 35ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.