ಕಡಬ: ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಬಿಳಿನೆಲೆ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಇದರ ಸಹಯೋಗದೊಂದಿಗೆ ಮೇ 13ರಿಂದ 17ರವರೆಗೆ ನಡೆಯುವ ಚಿಣ್ಣರ ಮೇಳ ಶಿಬಿರವನ್ನು ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ ಶೆಟ್ಟಿ ಮೇ.13ರಂದು ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ಅವರು ನಮ್ಮ ಪೂರ್ವಿಕರು ದುಡಿಮೆಯೊಂದಿಗೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲೆ ಪ್ರಸಿದ್ಧವಾಗಿದೆ. ನೃತ್ಯ, ಸಂಗೀತಾ ಸಂಭಾಷಣೆ, ವೇಷ ಭೂಷಣ, ನೃತ್ಯದೊಂದಿಗೆ ಉತ್ಸಾಹದಿಂದ ಸಂಯೋಜಿಸುತ್ತಿದ್ದರು. ಮುಂದಿನ ದಿನಗಳಲ್ಲಿ ನಮ್ಮ ತುಳುನಾಡು ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು.ಎಲ್ಲರಿಗೂ ಉತ್ತಮ ಭವಿಷ್ಯ ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.
ಗ್ರಾಮಿಣ ಮಕ್ಕಳ ಬೇಸಿಗೆ ಶಿಬಿರದ ಮಾರ್ಗದರ್ಶಕ ನಾದ ಮಣಿ ನಾಲ್ಕೂರು ಅಲೆಮಾರಿ ಹಾಡುಗಾರರು ಇವರ ತಂಡದಿಂದ ಮಕ್ಕಳಿಗೆ ಹಾಡಿನ ಜೊತೆಗೆ ನೃತ್ಯ ಪ್ರದರ್ಶಿಸಿ ಸ್ಪೂರ್ತಿಯನ್ನು ತುಂಬಿದರು.
ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದ ದಿನೇಶ್ ಮತ್ತು ನಿವೃತ ಮುಖ್ಯ ಶಿಕ್ಷಕಿ ಶಾರದ ಕೇಶವ ಗೌಡ ಬಿಳಿನೆಲೆ ಮಾತನಾಡಿ, ಈ ಕಾರ್ಯಕ್ರಮ ಅತ್ಯುತ್ತಮವಾಗಿ ನೆರವೇರುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿ ಶುಭ ಹಾರೈಸಿದರು. ಬಿಳಿನೆಲೆ ಗ್ರಾ.ಪಂ. ಸದಸ್ಯ ಸತೀಶ್ ಕಳಿಗೆ ಸಭೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ಆಪ್ತ ಸಮಲೋಚಕಿ ಶ್ವೇತಾ ಪ್ರತಾಪ್ ಬಂಟ್ವಾಳ ಮಕ್ಕಳ ಕೌಶಲ್ಯತೆವನ್ನು ಪ್ರದರ್ಶಿಸಲು ಸಹಕರಿಸಿದರು. ವಿನೀಶ್ ಬಿಳಿನೆಲೆ ಕಾರ್ಯಕ್ರಮ ನಿರ್ವಹಿಸಿದರು.ಬಿಳಿನೆಲೆ ಗ್ರಾ.ಪಂ. ಆಭಿವೃದ್ಧಿ ಅಧಿಕಾರಿ ಚಂದ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಸಂಗೀತಾ, ಉದಯಕುಮಾರ್ ವಂದಿಸಿದರು.