ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್ ನಲ್ಲಿ ನಾಳೆ ಮೇ.15 (ಗುರುವಾರ) ಪೂರ್ವಾಹ್ನ 10:00 ರಿಂದ ಅಪರಾಹ್ನ 05:00 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಕೆಎಸ್ಆರ್ಟಿಸಿ, ಟ್ಯಾಕ್ಸಿ ಸ್ಟಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐ.ಟಿ. ರೋಡ್, ಎ.ಪಿ.ಎಂ.ಸಿ. ರೋಡ್, ಸಾಮೆತ್ತಡ್ಕ, ಎಂ.ಟಿ. ರೋಡ್, ಚಿಕ್ಕಪುತ್ತೂರು ಮತ್ತು ಮಡಿವಾಳ ಕಟ್ಟೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.