ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ

0

ಪೆರ್ನಾಜೆ: ಕಲಾಕುಂಜ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಮೇ.27ರಂದು ದಾವಣಗೆರೆ ಚನ್ನಗಿರಿ ವಿರೂಪಾಕ್ಷ ಕಲ್ಯಾಣ ಮಂಟಪದಲ್ಲಿ ನಡೆದ 70ನೇ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆಯವರಿಗೆ ಸರಸ್ವತಿ ಸಾಧಕ ಸಿರಿ-2025 ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪ್ರಕಾರಗಳಲ್ಲಿ ಇವರ ಅತ್ಯುತ್ತಮ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಪ್ರತಿಷ್ಠಾನದ ಸಂಸ್ಥಾಪಕ ಗಣೇಶ ಶೆಣೈ ಪ್ರಶಸ್ತಿ ಪ್ರದಾನ ಮಾಡಿದರು.


ಪ್ರಾರಂಭದಲ್ಲಿ ಸಂಸ್ಥೆಯ ಮುತ್ತೈದೆಯರು ಕನ್ನಡ ತಿಲಕ ಇಟ್ಟು ಕನ್ನಡ ಕಂಕಣ ಕಟ್ಟಿ ಕನ್ನಡ ಆರತಿ ಬೆಳಗಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಿದರು. ನಂತರ ಕನ್ನಡ ಸಿರಿ ಪೇಟ, ಸನ್ಮಾನ ಪತ್ರ, ಚಿನ್ನದ ಲೇಪನದ ಪದಕ, ಶಾಲು, ಹಾರ, ಸರಸ್ವತಿ ದೇವಿಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೈಸೂರು ಜಿಲ್ಲೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಬೈರಿ ಕಾರ್ಯಕ್ರಮ ಉದ್ಘಾಟಿಸಿದರು. ಸೌಮ್ಯ ಪೆರ್ನಾಜೆ, ಸಂಗೀತ ಶಿಕ್ಷಕಿ ಸವಿತಾ ಕೋಡಂದೂರ್ ಹಾಗೂ ವಿವಿಧ ಗಣ್ಯರು, ಕಲಾವಿದರು, ಸಾಧಕರು ಉಪಸ್ಥಿತರಿದ್ದರು.


ತಮ್ಮ ವಿಶಿಷ್ಟ ಶೈಲಿಯ ಬರಹ ಲೇಖನಗಳಿಂದ ಚಿರಪರಿಚಿತರಾಗಿರುವ ಕುಮಾರ್ ಪೆರ್ನಾಜೆರವರು ಶಿವಮೊಗ್ಗದ ಕೃಷಿ ಮೇಳದಲ್ಲಿ ದ.ಕ ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿ, ಹವ್ಯಕ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೆ ಕಲಾ ಪೋಷಕ ಕಲಾ ನಿರ್ದೇಶಕ ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here