ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆಲ್ಯಾಡಿ ಐಐಸಿಟಿ ಎಜುಕೇಶನ್ ಹಾಲ್ನಲ್ಲಿ ಜರುಗಿತು.
ನಿಕಟ ಪೂರ್ವಾಧ್ಯಕ್ಷ ನಾರಾಯಣ ಬಲ್ಯ ಅವರ ನೇತೃತ್ವದಲ್ಲಿ ಅಧ್ಯಕ್ಷ ಶೀನಪ್ಪ ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಈ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಪ್ರಕಾಶ್ ಕೆ.ವೈ., ಕಾರ್ಯದರ್ಶಿಯಾಗಿ ಉಲ್ಲಾಹನನ್ ಪಿ.ಎಂ., ಹಾಗೂ ಕೋಶಾಧಿಕಾರಿಯಾಗಿ ಮೋಹನ್ ಕುಮಾರ್ ಡಿ., ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಚಂದ್ರಶೇಖರ ಬಾಣಜಾಲು, ಪ್ರಶಾಂತ್ ಸಿ.ಎಚ್, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ, ನಿರ್ದೇಶಕರಾಗಿ ಅಬ್ರಹಾಂ ವರ್ಗೀಸ್, ನಾರಾಯಣ ಬಲ್ಯ, ಜಾನ್ ಪಿ.ಎಸ್., ವಿ.ಆರ್. ಹೆಗ್ಡೆ, ನಿಕಟಪೂರ್ವ ಅಧ್ಯಕ್ಷರಾಗಿ ಶೀನಪ್ಪ ಎಸ್., ಆಯ್ಕೆಯಾದರು. ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ನ ರಾಷ್ಟ್ರೀಯ ನಿರ್ದೇಶಕ ಡಾ.ಸದಾನಂದ ಕುಂದರ್ರವರು ನೂತನ ತಂಡಕ್ಕೆ ಶುಭಹಾರೈಸಿದರು.