ವಿವಿಧ ಯೋಜನಾ ಕಾಮಗಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ರೂ.39 ಕೋಟಿ ಅನುದಾನ ಬಿಡುಗಡೆ – ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು:ವಿವಿಧ ಯೋಜನಾ ಕಾಮಗಾರಿಗಳಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಇದೀಗ ಮತ್ತೆ ರೂ.39 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕಿಂಡಿ ಅಣೆಕಟ್ಟಿಗೆ ರೂ.14.50 ಕೋಟಿ, ತೋಡು ಮತ್ತು ತಡೆಗೋಡೆಗೆ ರೂ.14.50 ಕೋಟಿ, ಈಶ್ವರಮಂಗಲ-ಕಾಸರಗೋಡು ಸಂಪರ್ಕ, ಕೆದಿಲ, ಆರ್ಯಾಪಿನಲ್ಲಿ ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.ಪುತ್ತೂರು ಮೆಡಿಕಲ್ ಕಾಲೇಜಿನ ಕಡತವನ್ನು ಬಜೆಟ್‌ನಲ್ಲಿ ಆರೋಗ್ಯ ಇಲಾಖೆಯಡಿಗೆ ತಂದು ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಯಾಕೆಂದರೆ ಅಲ್ಲಿ 500 ಬೆಡ್‌ನ ಆಸ್ಪತ್ರೆಗೆ ಡಿಪಿಆರ್ ಮಾಡಲು ವರದಿ ನೀಡಲಾಗಿದೆ. ಮುಂದೆ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿ ಆಸ್ಪತ್ರೆ ಕೊಠಡಿ ನಿರ್ಮಾಣ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅದಕ್ಕೆ ಸೂಚನೆ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈಗಾಗಲೇ ಆಸ್ಪತ್ರೆಯ ಕಟ್ಟಡಕ್ಕೆ ಡಿಪಿಆರ್ ಆಗಿ ಟೆಂಡರ್ ಆಗಲಿದೆ ಎಂದು ಹೇಳಿದ ಶಾಸಕರು,ಮುಂದಿನ ತಿಂಗಳು ಪುತ್ತೂರಿನ ಕೋರ್ಟ್ ಸಮುಚ್ಛಯ ಉದ್ಘಾಟನೆ ನಡೆಯಲಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ. ಆ ಸಂದರ್ಭ ನಮ್ಮ ಕನಸಿನಂತೆ ಆಸ್ಪತ್ರೆ ಕಟ್ಟಡಕ್ಕೂ ಶಿಲಾನ್ಯಾಸ ಮಾಡಲಿದ್ದೇವೆ. ತಾಲೂಕು ಮಟ್ಟದ ಕ್ರೀಡಾಂಗಣ,ಆರ್‌ಟಿಒ ಟೆಸ್ಟ್ ಟ್ರ್ಯಾಕ್ ರೋಡ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಶಿಲಾನ್ಯಾಸ ಮಾಡಲಿದ್ದೇವೆ ಎಂದರಲ್ಲದೆ, ಶಿಲಾನ್ಯಾಸ ಆಗ್ತದಾ, ಟೆಂಡರ್ ಆಗ್ತದಾ ಎಂದು ಪ್ರಶ್ನಿಸಿದವರಿಗೆ ಮಹಾಲಿಂಗೇಶ್ವರ ಮುಂದೆ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.


ಪುಡಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿ ಇದೆ: ಪುಡಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿ ಇದೆ. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮಗೆ ಯಾವುದೇ ನೋಟಿಸ್ ಬಂದಿಲ್ಲ. ನಗರಸಭೆಯ ವ್ಯಾಪ್ತಿಯೊಳಗೆ ಅಧ್ಯಕ್ಷರು ಇಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಅವರ ಆಯ್ಕೆ ಸಂದರ್ಭ ಎಲ್ಲಾ ದಾಖಲೆಯನ್ನು ಇಟ್ಟುಕೊಂಡೇ ಅವಕಾಶ ಕೊಟ್ಟಿರುವುದು. ನೋಟಿಸ್ ಬಂದರೆ ಅದಕ್ಕೆ ಸರಿಯಾದ ಉತ್ತರ ಕೊಡುತ್ತೇವೆ ಎಂದು, ಪತ್ರಕರ್ತರ ಪ್ರಶ್ನೆಗೆ ಶಾಸಕ ರೈ ಉತ್ತರಿಸಿದರು.

ಗ್ರಾಮೀಣ ಭಾಗದಲ್ಲಿ ಜೀಮ್ ಹೊಸ ಚಿಂತನೆ: ಗ್ರಾಮೀಣ ಮಟ್ಟದಲ್ಲಿ ಆರೋಗ್ಯದ ಕುರಿತು ಕಾಳಜಿ ಹುಟ್ಟಿಸುವ ನಿಟ್ಟಿನಲ್ಲಿ ನನ್ನ ವೈಯುಕ್ತಿಕ ಕಲ್ಪನೆಯ ಹೊಸ ಚಿಂತನೆಯಲ್ಲಿ ಗ್ರಾಮೀಣ ಭಾಗಕ್ಕೆ ಜಿಮ್ ಅಳವಡಿಸಲಿದ್ದೇವೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಕಾವು, ಉಪ್ಪಿನಂಗಡಿ, ವಿಟ್ಲ, ಕೇಪು ಸಹಿತ ಒಟ್ಟು 5 ಕಡೆ ಕ್ರೀಡಾ ಮೈದಾನದಲ್ಲಿ ಜಿಮ್ ಅಳವಡಿಸಲಾಗುವುದು. ಕೊಂಬೆಟ್ಟು ಸರಕಾರಿ ಕಾಲೇಜು ಬಳಿ ತಡೆಗೋಡೆಗೆ ರೂ.2 ಕೋಟಿ ಅನುದಾನ ಬರಲಿದೆ. ಅಲ್ಲಿ ಪೆಡ್‌ಲೈಟ್ ಅಳವಡಿಸಲಾಗುವುದು ಮತ್ತು ವ್ಯವಸ್ಥಿತ ಜಿಮ್ ಮಾಡಲಿದ್ದೇವೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here