ಪುತ್ತೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ 2023-24ನೇ ಸಾಲಿನಲ್ಲಿ ನಡೆದ ಬಿ.ಎಸ್‌ಸಿ (ಆನರ್ಸ್) ಕೃಷಿ ಪದವಿಯಲ್ಲಿ ಪಟ್ಟೆ ಪೆರಿಗೇರಿಯ ಹಿತಶ್ರೀ ಕೆ.ಬಿ.ರವರು ಚಿನ್ನದ ಪದಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮೇ.15ರಂದು ನಡೆದ ವಿಶ್ವವಿದ್ಯಾನಿಲಯದ 59ನೇ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಟ್ಟೆ ಶಾಲಾ ಹಿರಿಯ ವಿದ್ಯಾರ್ಥಿಯಾದ ಇವರು ಪೆರಿಗೇರಿ ಬೆಳಿಯಪ್ಪಗೌಡ ಮತ್ತು ಲಲಿತ ದಂಪತಿಯ ಪುತ್ರಿಯಾಗಿದ್ದಾರೆ.