ವಿಶಾಲ ಮಳಿಗೆ ವೈವಿಧ್ಯಮಯ ಉತ್ಪನ್ನಗಳು ಸುಧಾರಿತ ಸೇವೆ ಆಯ್ಕೆಗೆ ವಿಪುಲ ಅವಕಾಶ
ನೂತನ ಮಳಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಲಿ-ಗೌರಿ ಪೈ
ಹೆಚ್ಚು ಶಿಸ್ತು ಪಾಲಿಸಿಕೊಂಡವರು ಉದ್ಯಮಿಗಳು, ವ್ಯಾಪಾರಿಗಳು-ಫಾ|ಡಾ. ಆಂಟನಿ ಪ್ರಕಾಶ್ ಮೊಂತೆರೊ
ವಾಮನ ಪೈರವರು ನೇರ, ದಿಟ್ಟ ವ್ಯಕ್ತಿಯಾಗಿದ್ದಾರೆ-ಕೃಷ್ಣನಾರಾಯಣ ಮುಳಿಯ
ಪುತ್ತೂರಿನ ಉದ್ಯಮದ ಇತಿಹಾಸದಲ್ಲಿ ಪೈ ಕುಟುಂಬ ಚಿರವಾಗಿರಬೇಕು-ಜಿ.ಎಲ್.ಬಲರಾಮ ಆಚಾರ್ಯ
ವ್ಯಾಪಾರದಲ್ಲಿ ಅಪ್ಡೇಟ್ ಆಗುತ್ತಿರಬೇಕು-ಪ್ರಸನ್ನ ಎನ್.ಭಟ್ ಬಲ್ನಾಡು
ವಾಮನ ಪೈರವರು ಬಡವರಿಗೆ ಮಿಡಿಯುವ ಹೃದಯದವರು-ಎಂ.ಜಿ.ರಫೀಕ್
ಪುತ್ತೂರು, ಸುಳ್ಯ ತಾಲೂಕಿಗೆ ವಾಮನ ಪೈ ಕುಟುಂಬದ ಕೊಡುಗೆ ಅಪಾರ-ಸವಣೂರು ಸೀತಾರಾಮ ರೈ
ಗಣೇಶ್ ಟ್ರೇಡರ್ಸ್ ಕುಟುಂಬದ ವ್ಯಾಪಾರ ಕ್ಷೇತ್ರಕ್ಕೆ ಭವ್ಯ ಇತಿಹಾಸ-ಸುರೇಶ್ ಶೆಟ್ಟಿ
ಪುತ್ತೂರು: ಕಳೆದ 45ವರ್ಷಗಳಿಂದ ಗುಣಮಟ್ಟದ ವಸ್ತುಗಳೊಂದಿಗೆ ಗ್ರಾಹಕ ಸ್ನೇಹಿಯಾಗಿ ಎಲ್ಲಾ ವಿಭಾಗಗಳ ಜನರ ಪ್ರಶಂಸೆಗೆ ಪಾತ್ರರಾಗಿರುವ ಗಣೇಶ್ ಟ್ರೇಡರ್ಸ್ನ ವಿಸ್ತೃತಗೊಂಡ ವಿಶಾಲವಾದ ಮಲ್ಟಿ ಬ್ರ್ಯಾಂಡೆಡ್ ಟೈಲ್ಸ್ ಹಾಗೂ ಸ್ಯಾನಿಟರಿ ಶೋರೂಮ್ ಮೇ.16ರಂದು ಉದ್ಘಾಟನೆಗೊಂಡಿತು.

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಟೈಲ್ಸ್ ಶೋರೂಮ್ ಉದ್ಘಾಟಿಸಿದರು. ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಜಾಗ್ವಾರ್ ಬ್ರ್ಯಾಂಡ್ನ ಸ್ಯಾನಿಟರಿ ವಿಭಾಗ ಉದ್ಘಾಟಿಸಿದರು. ಶ್ರೀರಾಮ ಕನ್ಸ್ಟ್ರಕ್ಷನ್ ಮಾಲಕ ಪ್ರಸನ್ನ ಎನ್.ಭಟ್ ಬಲ್ನಾಡು ಮಲ್ಟಿ ಬ್ರ್ಯಾಂಡ್ ಸ್ಯಾನಿಟರಿ ಶೋರೂಮ್ ಉದ್ಘಾಟಿಸಿದರು. ಸಂಪ್ಯ ಆನಂದಾಶ್ರಮದ ಗೌರಿ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ನೂತನ ಮಳಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಲಿ-ಗೌರಿ ಪೈ:
ದೀಪ ಬೆಳಗಿಸಿ ಉದ್ಘಾಟಿಸಿದ ಗೌರಿ ಪೈ ಮಾತನಾಡಿ ಗಣೇಶ್ ಟ್ರೇಡರ್ಸ್ ಉತ್ತಮವಾಗಿ ನಡೆಯುತ್ತಿದೆ. ವಾಮನ ಪೈ ಪುತ್ತೂರಿನಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ. ನಮ್ಮ ಕುಟುಂಬದ ಸದಸ್ಯನಾಗಿರುವ ವಾಮನ ಪೈ ನನ್ನ ಫೀಲ್ಡ್ನಲ್ಲಿ ತುಂಬಾ ಸಹಾಯ ಮಾಡಿದ್ದಾನೆ. ಅವನು ಆರಂಭ ಮಾಡಿದ ನೂತನ ಮಳಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಸಮಾಜದಲ್ಲಿ ಹೆಚ್ಚು ಶಿಸ್ತು ಪಾಲಿಸಿಕೊಂಡವರು ಉದ್ಯಮಿಗಳು, ವ್ಯಾಪಾರಿಗಳು-ಫಾ| ಡಾ. ಆಂಟನಿ ಪ್ರಕಾಶ್ ಮೊಂತೆರೊ:
ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಫಾ|ಡಾ.ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ ನನಗೆ ವೈಯುಕ್ತಿಕವಾಗಿ ವಾಮನ ಪೈರವರಲ್ಲಿ ಇರುವಂತಹ ಅಭಿಮಾನ, ಪ್ರೀತಿಯಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಕಾಲೇಜಿನ ಕೆಲಸ ಕಾರ್ಯಗಳ ಬಗ್ಗೆ ಸಲಹೆ ನೀಡಿ ಅಭಿನಂದಿಸುತ್ತಿದ್ದರು. ನಾವು ನಂಬಿದ ತತ್ವ, ಸಿದ್ಧಾಂತ ಯಾವುದೇ ಇರಲಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ತೋರಿಸಿಕೊಟ್ಟವರಲ್ಲಿ ವಾಮನ ಪೈ ಒಬ್ಬರಾಗಿದ್ದಾರೆ ಎಂದರು. ನಾನು ಮೆಚ್ಚಿಕೊಳ್ಳುವ ಅತ್ಯುತ್ತಮ ವರ್ಗ ಎಂದರೆ ಉದ್ಯಮಿಗಳು. ಶಿಕ್ಷಕರಿಗಿಂತಲೂ ಹೆಚ್ಚು ಶಿಸ್ತನ್ನು ಪಾಲಿಸಿಕೊಂಡವರೆಂದರೆ ಉದ್ಯಮಿಗಳು ಹಾಗೂ ವ್ಯಾಪಾರಿಗಳು. ಅವರು ಬೆಳಿಗ್ಗೆ ಬೇಗ ಎದ್ದು ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೊಬೈಲ್ ಬಳಕೆಯನ್ನು ಕೂಡ ಮಿತವಾಗಿ ಮಾಡುವವರು ವ್ಯಾಪಾರಿಗಳು ಎಂದ ಅವರು ಭಗವಂತನು ನಿಮ್ಮಿಂದ ವ್ಯಾಪಾರದ ಮೂಲಕ ಸೇವೆ ನೀಡುವಂತೆ ಅನುಗ್ರಹಿಸಲಿ ಎಂದರು.
ವಾಮನ ಪೈರವರು ನೇರ, ದಿಟ್ಟ ವ್ಯಕ್ತಿಯಾಗಿದ್ದಾರೆ-ಕೃಷ್ಣನಾರಾಯಣ ಮುಳಿಯ:
ಟೈಲ್ಸ್ ಶೋರೂಮ್ ಉದ್ಘಾಟಿಸಿದ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ ಗಣೇಶ್ ಟ್ರೇಡರ್ಸ್ ಹಾಗೂ ವಾಮನ ಪೈರವರ ಬಗ್ಗೆ ಮಾತನಾಡುವುದೆಂದರೆ ಸೂರ್ಯನಿಗೆ ಟಾರ್ಚ್ ಹಿಡಿಯುವಂತೆ ಆಗಿದೆ. ಪುತ್ತೂರಿನಲ್ಲಿ ವಾಮನ ಪೈ ಎಲ್ಲರಿಗೂ ಗೊತ್ತಿರುವ ವ್ಯಕ್ತಿತ್ವವಾಗಿದೆ. ಅವರು ನೇರ, ದಿಟ್ಟ ವ್ಯಕ್ತಿಯಾಗಿದ್ದಾರೆ. ಮುಳಿಯ ಸಂಸ್ಥೆಗೆ ಕೂಡ ಗಣೇಶ್ ಟ್ರೇಡರ್ಸ್ ಮಳಿಗೆಯಿಂದಲೇ ಐಟಂಗಳನ್ನು ಖರೀದಿ ಮಾಡಲಾಗಿದೆ. ತಂದೆಯನ್ನು ಮಗ ಮೀರಿಸಿದಂತೆ, ಗುರುವನ್ನು ಶಿಷ್ಯ ಮೀರಿಸಿದ ಹಾಗೆ ವಾಮನ ಪೈರವರ ಪುತ್ರ ಕೂಡ ಉದ್ಯಮದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದ ಅವರು ಶೋರೂಮ್ ಉತ್ತಮವಾಗಿ ಬೆಳೆದು ಪುತ್ತೂರಿಗೆ ಕೊಡುಗೆ ನೀಡಲಿ ಎಂದರು ಹಾರೈಸಿದರು.
ಪುತ್ತೂರಿನ ಉದ್ಯಮದ ಇತಿಹಾಸದಲ್ಲಿ ಪೈ ಕುಟುಂಬ ಚಿರವಾಗಿರಬೇಕು-ಜಿ.ಎಲ್.ಬಲರಾಮ ಆಚಾರ್ಯ:
ಜಾಗ್ವಾರ್ ಬ್ರ್ಯಾಂಡ್ನ ಸ್ಯಾನಿಟರಿ ವಿಭಾಗ ಉದ್ಘಾಟಿಸಿದ ಜಿ.ಎಲ್.ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಮಾತನಾಡಿ ಗ್ರಾಹಕರ ದೃಷ್ಟಿಯಿಂದ ಪುತ್ತೂರಿನಲ್ಲಿ ಉತ್ತಮ ಬೆಳವಣಿಗೆ. ಟೈಲ್ಸ್, ಸ್ಯಾನಿಟರಿ ಮಳಿಗೆಯನ್ನು ವ್ಯವಸ್ಥಿತವಾಗಿ ಆರಂಭಿಸಿ ಪುತ್ತೂರಿನ ದೀರ್ಘಕಾಲದ ಕೊರತೆಯನ್ನು ನೀಗಿಸಿದ್ದಾರೆ. ಕುಟುಂಬ ಸಮೇತರಾಗಿ ಬಂದು ಟೈಲ್ಸ್ ಸ್ಯಾನಿಟರಿಯನ್ನು ಖರೀದಿ ಮಾಡುವ ವ್ಯವಸ್ಥೆ ಇದೆ., ಇದಕ್ಕೆ ವಾಮನ ಪೈ ಕುಟುಂಬಕ್ಕೆ ಅಭಿನಂದನೆ ಎಂದರು. ವಾಮ ಪೈರವರ ಕುಟುಂಬ ನಾಲ್ಕು ತಲೆಮಾರಿನಿಂದ ವ್ಯವಹಾರ ಮಾಡುತ್ತಿರುವ ಕುಟುಂಬವಾಗಿದೆ. ಪುತ್ತೂರಿನ ಉದ್ಯಮದ ಇತಿಹಾಸ ಬರೆಯುವುದಾದರೆ ಪೈ ಕುಟುಂಬದ ವ್ಯವಹಾರದ ಚಿತ್ರಣವನ್ನು ಸೇರಿಸಬಹುದು. ಗಣೇಶ್ ಟ್ರೇಡರ್ಸ್ ಉತ್ತಮ ಸೇವೆ ನೀಡುವುದರ ಮೂಲಕ ಪುತ್ತೂರಿನಲ್ಲಿ ಗ್ರಾಹಕ ಸ್ನೇಹಿಯಾಗಿದೆ. ನಾನು ಕೂಡ ಓರ್ವ ಸಂತೃಪ್ತ ಗ್ರಾಹಕನಾಗಿದ್ದೇನೆ. ಬ್ರ್ಯಾಂಡೆಡ್ ಕಂಪೆನಿಗಳ ಉತ್ಪನ್ನಗಳ ಖರೀದಿ ಬಳಿಕ ಕಂಪೆನಿಯ ಮೂಲಕವೇ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದ ಅವರು ನೂತನ ಶೋರೂಮ್ಗೆ ಶುಭಹಾರೈಸಿದರು.
ವ್ಯಾಪಾರದಲ್ಲಿ ಅಪ್ಡೇಟ್ ಆಗುತ್ತಿರಬೇಕು-ಪ್ರಸನ್ನ ಎನ್.ಭಟ್ ಬಲ್ನಾಡು:
ಮಲ್ಟಿ ಬ್ರ್ಯಾಂಡ್ ಸ್ಯಾನಿಟರಿ ಶೋರೂಮ್ ಉದ್ಘಾಟಿಸಿದ ಶ್ರೀರಾಮ ಕನ್ಸ್ಟ್ರಕ್ಷನ್ ಮಾಲಕ ಪ್ರಸನ್ನ ಎನ್.ಭಟ್ ಬಲ್ನಾಡು ಮಾತನಾಡಿ ಗಣೇಶ್ ಟ್ರೇಡರ್ಸ್ ಸಂಸ್ಥೆಗೂ ನನಗೂ ತುಂಬಾ ಹತ್ತಿರದ ಸಂಬಂಧವಾಗಿದೆ. ನಾನು ಅತ್ಯಂತ ಹಳೆಯ ಗ್ರಾಹಕನಾಗಿದ್ದೇನೆ. ಗಣೇಶ್ ಟ್ರೇಡರ್ಸ್ ಆರಂಭದ ಸಮಯದಲ್ಲಿಯೇ ನಾನು ಗ್ರಾಹಕನಾಗಿದ್ದೆ. ವ್ಯಾಪಾರದಲ್ಲಿ ಅಪ್ಡೇಟ್ ಆಗುತ್ತಿರಬೇಕು. ಇದರಿಂದ ವ್ಯವಹಾರವೂ ವೃದ್ಧಿಸುತ್ತದೆ ಎಂದ ಅವರು ಗಣೇಶ್ ಟ್ರೇಡರ್ಸ್ ಸಂಸ್ಥೆಯು ಪುತ್ತೂರು ಅಲ್ಲದೆ ಹತ್ತೂರಿನ ಜನತೆಗೆ ಉಪಯೋಗವಾಗಲಿ ಎಂದ ಅವರು ವ್ಯಾಪಾರ, ವ್ಯವಹಾರ ವೃದ್ಧಿಸಲಿ ಎಂದು ಶುಭಹಾರೈಸಿದರು.
ವಾಮನ ಪೈರವರು ಬಡವರಿಗೆ ಮಿಡಿಯುವ ಹೃದಯದವರು-ಎಂ.ಜಿ.ರಫೀಕ್:
ಪುತ್ತೂರು ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ.ರಫೀಕ್ ಮಾತನಾಡಿ ಯಶಸ್ವಿ ಪುರುಷನ ಜತೆ ಮಹಿಳೆ ಇರುತ್ತಾರೆ. ಅದರಂತೆ ಗಣೇಶ್ ಟ್ರೇಡರ್ಸ್ ಉದ್ಯಮದ ಎಲ್ಲಾ ಕ್ರೆಡಿಟ್ ವಾಮನ ಪೈರವರ ಪತ್ನಿಗೆ ಸಲ್ಲಬೇಕು. ವಾಮನ ಪೈ ಮತ್ತು ನಾನು ಬಹಳ ಹಿಂದಿನ ಗೆಳೆಯರು. ನಾನು ಅತ್ಯಂತ ಹತ್ತಿರದಿಂದ ಕಂಡವನು. ಅವರು ಶೀಘ್ರ ಕೋಪಿಷ್ಟನಾದರೂ ಬಡವರಿಗೆ ಮಿಡಿಯುವ ಹೃದಯ ಅವರದ್ದು. ಕ್ಷಮೆ ನೀಡುವ ವ್ಯಕ್ತಿಯಾದ ಇವರು ಕ್ಷಮೆ ಕೇಳಲು ಮುಂದಾಗುವವರು. ನೆಮ್ಮದಿ ಮತ್ತು ಸಂತೋಷ ಖರೀದಿ ಮಾಡಲು ಸಾಧ್ಯವಿಲ್ಲ. ದುಖಃ, ಬೇಸರವನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ವಾಮಪ ಪೈರವರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದ ಅವರು ವಾಮನ ಪೈರವರ ಕುಟುಂಬವೇ ವ್ಯಾಪಾರದಲ್ಲಿ ತೊಡಗಿದೆ. ಅವರ ಉದ್ಯಮ ಯಶಸ್ಸಾಗಲಿ ಎಂದು ಹಾರೈಸಿದರು.
ಪುತ್ತೂರು, ಸುಳ್ಯ ತಾಲೂಕಿಗೆ ವಾಮನ ಪೈ ಕುಟುಂಬದ ಕೊಡುಗೆ ಅಪಾರ-ಸವಣೂರು ಸೀತಾರಾಮ ರೈ:
ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿ ನಾನು ವಾಮನ ಪೈರವರು ರೋಟರಿ ಕ್ಲಬ್ ಮೂಲಕ ಒಟ್ಟಾಗಿ ಕೆಲಸ ಮಾಡಿದವರು. ಸವಣೂರಿನಲ್ಲಿ ನಾನು ಪೆಟ್ರೋಲ್ ಬಂಕ್ ಪ್ರಾರಂಭಿಸಲು ಪ್ರೇರಣೆ ನೀಡಿದವರು ವಾಮನ ಪೈರವರು. ಅದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಪುತ್ತೂರು ಹಾಗೂ ಸುಳ್ಯ ತಾಲೂಕಿಗೆ ವಾಮನ ಪೈ ಕುಟುಂಬದ ಕೊಡುಗೆ ಅಪಾರವಿದೆ. ಗ್ರಾಹಕರನ್ನು ಹಾಗೂ ಸಿಬಂದಿಗಳನ್ನು ತುಂಬಾ ಗೌರವದಿಂದ ಕಾಣುವವರು. ಇಂದು ಸಿಬಂದಿಗಳನ್ನು ಗುರುತಿಸಿ ಅಭಿನಂದಿಸಿದ್ದು ಅವರ ಮಾನವೀಯತೆಗೆ ಸಾಕ್ಷಿಯಾಗಿದೆ. ಉದ್ಯಮ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದ ಅವರು ಶೋರೂಮ್ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಗಣೇಶ್ ಟ್ರೇಡರ್ಸ್ ಕುಟುಂಬದ ವ್ಯಾಪಾರ ಕ್ಷೇತ್ರಕ್ಕೆ ಭವ್ಯ ಇತಿಹಾಸ-ಸುರೇಶ್ ಶೆಟ್ಟಿ:
ಪ್ರಾಸ್ತಾವಿಕವಾಗಿ ಮಾತನಾಡಿದ ಸುರೇಶ್ ಶೆಟ್ಟಿರವರು ಗಣೇಶ್ ಟ್ರೇಡರ್ಸ್ನ ಕುಟುಂಬದ ವ್ಯಾಪಾರ ಕ್ಷೇತ್ರಕ್ಕೆ 115 ವರ್ಷಗಳ ಭವ್ಯ ಇತಿಹಾಸವಿದೆ. ಈ ಮಳಿಗೆಯ ಮಾಲಕರಾದ ವಾಲಕರಾದ ವಾಮನ ಪೈರವರ ಅಜ್ಜ ಪಾಣೆಮಂಗಳೂರು ಗೋಪಾಲ ಪೈರವರು ಕುಟುಂಬ ಸಮೇತರಾಗಿ 1906ರಲ್ಲಿ ಪುತ್ತೂರಿಗೆ ಆಗಮಿಸಿ ಕುಲಕಸುಬು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಮೊದಲು ಮರದ ವ್ಯಾಪಾರ ಆರಂಭಿಸಿದ ಅವರು ಬಳಿಕ ಇತರ ಕ್ಷೇತ್ರಗಳಿಗೂ ವ್ಯಾಪಾರ ವಿಸ್ತರಿಸಿದರು. ಎಲ್ಲಾ ಕ್ಷೇತ್ರಗಳ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿದ ಇವರ ನಾಲ್ಕು ಮಂದಿ ಪುತ್ರರಲ್ಲಿ ಒಬ್ಬರಾದ ನರಸಿಂಹ ಪೈರವರ ಪುತ್ರರಾದ ವಾಮನ ಪೈರವರು 1981ರಲ್ಲಿ ಗಣೇಶ್ ಟ್ರೇಡರ್ಸ್ ಎಂಬ ಹೊಸ ವ್ಯಾಪಾರ ಆರಂಭಿಸಿದರು. ಕಳೆದ 45 ವರ್ಷಗಳಿಂದ ಉದ್ಯಮ ನಡೆಸುತ್ತಿದ್ದು ಇದೀಗ ವಿಸ್ತೃತ ಶೋರೂಮ್ ಉದ್ಘಾಟನೆಗೊಂಡಿದೆ ಎಂದರು.
ಆಡಳಿತ ಪಾಲುದಾರರಾದ ನರಸಿಂಹ ಪೈ ಸ್ವಾಗತಿಸಿ ಮಾತನಾಡಿ ನನ್ನ ತಂದೆಯವರು ಹಾರ್ಡ್ವೇರ್ ಮತ್ತು ಪ್ಲಂಬಿಂಗ್ ವ್ಯಾಪಾರ ಆರಂಭಿಸಿದರು. ಬಳಿಕ ಪೈಂಟ್ಸ್ ಮಾರಾಟ ಆರಂಭಿಸಲಾಯಿತು. 2000ನೇ ಇಸವಿಯಲ್ಲಿ ಸ್ಯಾನಿಟರ್ ಮತ್ತು ಟೈಲ್ಸ್ ವ್ಯಾಪಾರ ಪ್ರಾರಂಭ ಮಾಡಲಾಯಿತು. ಶೋರೂಮ್ ಮಾಡಲು ನಮಗೆ ಹಲವರು ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ಆರ್ಕಿಟೆಕ್ಟರ್ ರಾಂಪ್ರಕಾಶ್ರವರು ಶೋರೂಮ್ನ ಕಲ್ಪನೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಸನ್ಮಾನ:
ಶೋರೂಮ್ನ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದವರನ್ನು ಸನ್ಮಾನಿಸಲಾಯಿತು. ಶೋರೂಮ್ ಆರ್ಕಿಟೆಕ್ಚರ್ ರಾಂಪ್ರಕಾಶ್, ಇಲೆಕ್ಟ್ರಿಕಲ್ ವ್ಯವಸ್ಥೆ ಮಾಡಿದ ಹರಿಶ್ಚಂದ್ರ, ಫ್ಯಾಬ್ರಿಕೇಟರ್ ಕೆಲಸ ಮಾಡಿದ ಮಂಜುರವರನ್ನು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪಾಪ್ಯುಲರ್ ಗ್ರೂಪ್ಸ್ನ ಆಡಳಿತ ನಿರ್ದೇಶಕ ನರಸಿಂಹ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಚಿ ಪ್ರಾರ್ಥಿಸಿದರು. ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕ ಭರತ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಟ್ರೇಡರ್ಸ್ ಆಡಳಿತ ಪಾಲುದಾರ ವಾಮನ ಪೈ ವಂದಿಸಿದರು. ವಾಮನ ಪೈರವರ ಪತ್ನಿ ಅನುರಾಧ ವಿ.ಪೈ, ಸೊಸೆ ಸಂಧ್ಯಾ ಎನ್.ಪೈ ಅತಿಥಿ ಗಣ್ಯರನ್ನು ಗೌರವಿಸಿ ಸತ್ಕರಿಸಿದರು.
ನಮ್ಮ ಕುಟುಂಬ ಮೂರು ತಲೆಮಾರಿನಿಂದ ಉದ್ಯಮ ನಡೆಸಿಕೊಂಡು ಬಂದಿದೆ
1984ರಲ್ಲಿ ನನ್ನ ವೈಯುಕ್ತಿಕ ಚಿಂತನೆಯೊಂದಿಗೆ ಗಣೇಶ್ ಟ್ರೇಡರ್ಸ್ ಆರಂಭಿಸಿದ್ದೇವೆ. ಹಾರ್ಡ್ವೇರ್ನೊಂದಿಗೆ ಕೃಷಿ ಉಪಕರಣ, ಪಿವಿಸಿ ಪೈಪ್ಸ್ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆರಂಭ ಮಾಡಿದ್ದೆವು. 2000ದ ಇಸವಿಯಲ್ಲಿ ಟೈಲ್ಸ್, ಬಳಿಕ ಜಾಗ್ವಾರ್ ಕಂಪೆನಿ ಸೇರಿದಂತೆ ಉತ್ತಮ ಕಂಪೆನಿಗಳ ಡೀಲರ್ಶಿಪ್ ಪಡೆದುಕೊಂಡಿದ್ದೇವೆ. ಶೋರೂಮ್ನಲ್ಲಿ ಹಲವು ಬ್ರ್ಯಾಂಡ್ಗಳ ಟೈಲ್ಸ್, ಸ್ಯಾನಿಟರಿ ಲಭ್ಯವಿದೆ. ಗ್ರಾಹಕರಿಗೆ ತಮ್ಮ ಹಣಕ್ಕೆ ಸರಿಯಾದ ಮೌಲ್ಯವುಳ್ಳ ಉತ್ಪನ್ನಗಳನ್ನು ಕೊಡಬೇಕೆಂದು ನನ್ನ ಉದ್ಧೇಶವಾಗಿದೆ. ನಮ್ಮ ಪೈ ಕುಟುಂದವರು ಮೂರು ತಲೆಮಾರಿನಿಂದ ಉದ್ಯಮ ನಡೆಸಿಕೊಂಡು ಬಂದವರು. ಪ್ರತಿಯೊಬ್ಬ ಗ್ರಾಹಕನಿಗೂ ಉತ್ತಮ ಗುಣಮಟ್ಟದ ವಸ್ತುಗಳು ದೊರೆಯಬೇಕು ಎಂಬ ಉದ್ಧೇಶ ಹೊಂದಿದ್ದೇನೆ
ವಾಮನ ಪೈ, ಆಡಳಿತ ಪಾಲುದಾರರು, ಗಣೇಶ್ ಟ್ರೇಡರ್ಸ್
ಜಾಗ್ವಾರ್ ಬ್ರ್ಯಾಂಡ್ಗೆ ಪುತ್ತೂರಿನಲ್ಲಿ ಉತ್ತಮ ಅವಕಾಶ ನೀಡಿದ್ದಾರೆ
ಗಣೇಶ್ ಟ್ರೇಡರ್ಸ್ ನಾಲ್ಕನೇ ತಲೆಮಾರಿನ ಉದ್ಯಮವಾಗಿದೆ. ಅವರೊಂದಿಗೆ ಜಾಗ್ವಾರ್ ಕಂಪೆನಿ ಆಸೋಸಿಯೇಟ್ ಆಗಿದೆ. ಪುತ್ತೂರಿನ ಮಾರುಕಟ್ಟೆಯಲ್ಲಿ ನಮ್ಮ ಬ್ರ್ಯಾಂಡ್ ನಿರ್ಮಾಣ ಮಾಡಲು ತುಂಬಾ ಸಹಕಾರ ಮಾಡಿದ್ದಾರೆ. ಎಲ್ಲಾ ವರ್ಗದ ಜನರಿಗೆ ಬೇಕಾದ ಐಟಂಗಳನ್ನು ಪೂರೈಸುವ ಬ್ರ್ಯಾಂಡ್ ಜಾಗ್ವಾರ್ ಆಗಿದೆ. ಒಳ್ಳೆಯ ಶೋರೂಮ್ ಮೂಲಕ ಪ್ರೈಮ್ ಅವಕಾಶವನ್ನು ಜಾಗ್ವಾರ್ ಬ್ರ್ಯಾಂಡ್ಗೆ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು.
ಲಕ್ಷ್ಮೀಕಾಂತ್, ಝೋನಲ್ ಮ್ಯಾನೇಜರ್, ಜಾಗ್ವಾರ್ ಕಂಪೆನಿ
ಗಣೇಶ್ ಟ್ರೇಡರ್ಸ್ ಸಿಬ್ಬಂದಿಗಳಿಗೆ ಸನ್ಮಾನ
ಗಣೇಶ್ ಟ್ರೇಡರ್ಸ್ನ ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬಂದಿಗಳನ್ನು ಸನ್ಮಾನಿಸಲಾಯಿತು. ಸಿಬಂದಿಗಳಾದ ಚಂದ್ರಶೇಖರ, ಸುರೇಶ್, ಶೇಖ್ ಇಸ್ಮಾಯಿಲ್, ಮಹಮ್ಮದ್ ಆರೀಫ್, ಶ್ರೀನಿವಾಸ್, ಶಶಿಧರ, ಗಂಗಾಧರ, ದೀಕ್ಷಿತ್ ಹಾಗೂ ಸವಿತಾರವರನ್ನು ವಾಮನ ಪೈ ದಂಪತಿ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಚಿತ್ರ: ಪ್ರಭು ಸ್ಟುಡಿಯೋ