ಪುತ್ತೂರು:ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೋರ್ವ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭವತಿಯಾಗಿರುವ ಮತ್ತು ಪ್ರಕರಣ ಠಾಣೆಯ ಮೆಟ್ಟಿಲೇರಿ ರಾಜಿ ಮಾತುಕತೆ ನಡೆದಿರುವುದಾಗಿ ಸುದ್ದಿ ಹರಡಿದೆ.
ಪ್ರೌಢಶಾಲೆಯ ಹಂತದಿಂದಲೇ ಪರಿಚಿತರೆನ್ನಲಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯ ನಡುವೆ ಪ್ರೇಮಾಂಕುರವಾಗಿ ಅದು ದೈಹಿಕ ಸಂಪರ್ಕ ಬೆಳೆಸುವ ತನಕ ಮುಂದುವರಿದ ಪರಿಣಾಮ ಇದೀಗ ವಿದ್ಯಾರ್ಥಿನಿ ಗರ್ಭವತಿಯಾಗಿದ್ದಾರೆ.ಈ ವಿಚಾರದ ಕುರಿತು ವಿದ್ಯಾರ್ಥಿನಿ ಮನೆಯವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವ ಹಂತಕ್ಕೆ ತಲುಪಿ ಬಳಿಕ ಪ್ರಮುಖರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು, ಸಂತ್ರಸ್ತ ವಿದ್ಯಾರ್ಥಿನಿಯೊಂದಿಗೆ ಮದುವೆಗೆ ಯುವಕ, ಮನೆಯವರು ಒಪ್ಪಿಗೆ ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಸಂದೇಶಗಳು ವೈರಲ್ ಆಗುತ್ತಿವೆ.