ರಾಜ್ಯದ ಮೊದಲ ಹತ್ತು ರ್ಯಾಂಕ್ಗಳಲ್ಲಿ ಎಂಟು ರ್ಯಾಂಕ್ ಪಡೆದ ವಿದ್ಯಾರ್ಥಿಗಳು
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಎರಡೂ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ದ್ವಿತೀಯ ಪಿಯುಸಿ ಎರಡನೆಯ ಹಂತದ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿವೆ. ಕಳೆದ ಐದು ವರ್ಷಗಳಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ನೂರು ಶೇಕಡಾ ಫಲಿತಾಂಶ ದಾಖಲಿಸುತ್ತಿವೆ.
ಮೊದಲ ಹಂತದ ಪರೀಕ್ಷೆಯ ಫಲಿತಾಂಶವನ್ನು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಮತ್ತಷ್ಟು ಉನ್ನತವಾಗಿಸಿವೆ ಎಂಬುದು ಗಮನಾರ್ಹ. ಪುತ್ತೂರಿನ ಚಿದಾನಂದ ಪೂಜಾರಿ ಮತ್ತು ಶೋಭಾ.ಎಂ ದಂಪತಿಯ ಪುತ್ರಿ ಹಿಮಾನಿ ಎ.ಸಿ ಅವರು 597 ಅಂಗಳೊಂದಿಗೆ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಕಡಬ ಕಾಣಿಯೂರಿನ ಪದ್ಮನಾಭ ಜಿ ಮತ್ತು ಹೇಮಾವತಿ ದಂಪತಿಯ ಪುತ್ರ ಉತ್ತಮ್ ಜಿ ಅವರು 596 ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ ಹಾಗೂ ರಾಜ್ಯಕ್ಕೆ ಐದನೇ ರ್ಯಾಂಕ್, ಪುತ್ತೂರು ಬಪ್ಪಳಿಗೆಯ ಬಿ ಕೆ ಸುರೇಶ್ ಮತ್ತು ಜಯಂತಿ ಎಸ್ ದಂಪತಿಯ ಪುತ್ರಿ ಕೆ ಎಸ್ ಮನೀಶಾ ಅವರು 595 ಅಂಕಗಳನ್ನು ಪಡೆದು ತಾಲೂಕಿಗೆ ತೃತೀಯ ಹಾಗೂ ರಾಜ್ಯಕ್ಕೆ ಆರನೇ ರ್ಯಾಂಕ್, ಪುತ್ತೂರು ಚಿಕ್ಕಮುಡ್ನೂರಿನ ಶ್ರೀನಿವಾಸ ಬಡೆಕಿಲ್ಲಾಯ ಮತ್ತು ರೇಖಾ ಕೆ ವಿ ದಂಪತಿಯ ಪುತ್ರ ಅಜಿತ್ ಕುಮಾರ್ ಕೆ ಎಸ್ ಅವರು 594 ಅಂಕಗಳನ್ನು ಗಳಿಸಿ ತಾಲೂಕಿಗೆ ನಾಲ್ಕನೇ ಹಾಗೂ ರಾಜ್ಯಕ್ಕೆ ಏಳನೇ ರ್ಯಾಂಕ್, ಪುತ್ತೂರಿನ ಶಿವರಾಮ್ ಆಳ್ವ ಮತ್ತು ಸೀಮಾ ಆಳ್ವ ದಂಪತಿಯ ಪುತ್ರಿ ವರ್ಷಿಣಿ ಆಳ್ವ ಹಾಗೂ ಕಡಬ ಕಾಣಿಯೂರಿನ ಪ್ರದೀಪ್ ಬಿ ಮತ್ತು ವಿದ್ಯಾ ದಂಪತಿಯ ಪುತ್ರ ವಿಕಾಸ್ ಬಿ ಅವರು 593 ಅಂಕಗಳೊಂದಿಗೆ ತಾಲೂಕಿಗೆ ಐದನೇ ಹಾಗೂ ರಾಜ್ಯಕ್ಕೆ ಎಂಟನೇ ರ್ಯಾಂಕ್ ಗಳಿಸಿದ್ದಾರೆ. ಕಡಬ ಸುಬ್ರಹ್ಮಣ್ಯದ ರಾಘವೇಂದ್ರ ಆಚಾರ್ ಮತ್ತು ಸುಧಾಮಣಿ ದಂಪತಿಯ ಪುತ್ರಿ ಅನ್ವಿತಾ ಕೆ ಹಾಗೂ ಸುಳ್ಯ ಕನಕಮಜಲಿನ ಜಿ ಮುರಲಿಕೃಷ್ಣ ಭಟ್ ಮತ್ತು ಶ್ವೇತಾ ಎಂ ಭಟ್ ದಂಪತಿಯ ಪುತ್ರಿ ವೈಷ್ಣವಿ ಜಿ ಭಟ್ 591 ಅಂಕ ಗಳಿಸುವುದರ ಮೂಲಕ ತಾಲೂಕಿಗೆ ಏಳನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಗಳಿಸಿದ್ದಾರೆ.
ಈ ಮೂಲಕ ರಾಜ್ಯದ ಮೊದಲ ಹತ್ತು ರ್ಯಾಂಕ್ಗಳಲ್ಲಿ ಅಂಬಿಕಾ ವಿದ್ಯಾರ್ಥಿಗಳು 8 ರ್ಯಾಂಕ್ ಗಳನ್ನು ತಮ್ಮದಾಗಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.