ಬೆಂಗಳೂರಿನಲ್ಲಿ ನೃತ್ಯೋತ್ಸವ ಸಂಭ್ರಮಾಚರಣೆ – 12 ಪ್ರಸಿದ್ಧ ತಂಡದಲ್ಲಿ ಪುತ್ತೂರು ಮೂಕಾಂಬಿಕಾ ನೃತ್ಯಪ್ರದರ್ಶನ

0

ಪುತ್ತೂರು: ಬೆಂಗಳೂರಿನ ನೃತ್ಯ ಸಂಸ್ಥೆ ಶ್ರೀ ರಾಜರಾಜೇಶ್ವರಿ ಕಲಾನಿಕೇತನ ಇದರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ’ಸಮನ್ವಯ ಕಲಾ ಉತ್ಸವ’ ದಲ್ಲಿ ’ಶ್ರೀ ಕೃಷ್ಣ ಲೀಲಾರ್ಣವ’ ಎಂಬ ವಿಷಯಾಧಾರಿತ ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದ 12 ಪ್ರಸಿದ್ಧ ತಂಡಗಳಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಕೂಡ ಒಂದಾಗಿತ್ತು.


ವಿದ್ವಾನ್ ದೀಪಕ್ ಕುಮಾರ್‌ರವರ ನಿರ್ದೇಶನದಲ್ಲಿ ಮೂಡಿಬಂದ ಕುಬ್ಜಾ ಸನ್ನಿವೇಶ, ಕುವಲಯಾಪೀಡ ಆನೆಯ ಸಂಹಾರ, ಕಂಸ ಸಂಹಾರ, ಇತ್ಯಾದಿ ಸನ್ನಿವೇಶಗಳ ನೃತ್ಯರೂಪಕ ಪ್ರದರ್ಶನ ನೀಡಲಾಯಿತು.

LEAVE A REPLY

Please enter your comment!
Please enter your name here