ಮೇ 19:ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆ ವಿಸ್ತೃತ ಮಳಿಗೆಯೊಂದಿಗೆ ಬೊಳ್ವಾರು ಜಿ.ಎಲ್ ಟ್ರೇಡ್ ಸೆಂಟರ್‌ನಲ್ಲಿ ಶುಭಾರಂಭ

0

ಪುತ್ತೂರು: ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಉದ್ಯಮದಲ್ಲಿ ಶ್ರೇಷ್ಟ ಗುಣಮಟ್ಟ ಹಾಗೂ ಅತ್ತ್ಯುತ್ತಮ ಬೆಲೆಯೊಂದಿಗೆ ಪ್ರತಿಷ್ಠಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್, ಬಿಇಲ್‌ಡಿಸಿ ಫ್ಯಾನ್ಸ್ ಹೀಗೆ ಗೃಹಪಯೋಗಿ ಉಪಕರಣಗಳನ್ನು ಕಳೆದ ಹಲವಾರು ವರ್ಷಗಳೊಂದಿಗೆ ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯು ಸೇವೆ ನೀಡುತ್ತಾ ಬಂದಿದ್ದು, ಇದೀಗ ಗ್ರಾಹಕರ ಅನುಕೂಲತೆಗೋಸ್ಕರ ಬೊಳ್ವಾರು ಬಂಟರ ಭವನದ ಎದುರುಗಡೆಯ ಜಿ.ಎಲ್ ಟ್ರೇಡ್ ಸೆಂಟರ್‌ಗೆ ಸ್ಥಳಾಂತರಗೊಂಡು ಮೇ.19 ರಂದು ನೂತನ ವಿಸ್ತೃತ ಮಳಿಗೆಯೊಂದಿಗೆ ಲೋಕಾರ್ಪಣೆಯಾಗಲಿದೆ.


ಪುತ್ತೂರು ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಬಲರಾಮ ಆಚಾರ್ಯ ಜಿ.ಎಲ್‌ರವರು ನೂತನ ವಿಸ್ತೃತ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದರ್ಬೆ ಬ್ಯಾಂಕ್ ಆಫ್ ಬರೋಡದ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂರವರ ಸಹಿತ ಹಲವರು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಮತ್ತು ಬಿಇಲ್‌ಡಿಸಿ ಫ್ಯಾನ್ಸ್‌ಗಳ ಮಾರಾಟ ಮೇಳ ಉತ್ಸವವು ಎ.19 ರಿಂದ 31ರ ವರೆಗೆ ಜರಗಲಿದೆ. ಫ್ಯಾನ್ಸಿ ಲೈಟ್‌ಗಳ ಮೇಲೆ ಶೇ.50 ಡಿಸ್ಕೌಂಟ್, ಪ್ರತಿ ವಾಕ್ ಇನ್‌ಗೂ ಕೂಪನ್ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಮಳಿಗೆಯು ಒದಗಿಸುತ್ತಿದೆ.


ಮಳಿಗೆಯಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಫಿಲಿಪ್ಸ್, ಅಟೊಂಬಾರ‍್ಗ್, ಹ್ಯಾವೆಲ್ಸ್, ಪಾಲಿಕಾಬ್, ಕ್ರಾಂಪ್ಟನ್, ಓರಿಯೆಂಟ್, ಲ್ಯೂಕರ್, ಆಂಕರ್, ಪೆನಸೋನಿಕ್ ಕಂಪೆನಿಗಳ ಗುಣಮಟ್ಟದ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲತೆಗೋಸ್ಕರ ಮಳಿಗೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಾಗಿದೆ. ವಿದ್ಯುತ್ ಉಳಿತಾಯದ ಸಮಗ್ರ ಲೈಟಿಂಗ್ಸ್‌ಗಳಿಗಾಗಿ ಮಳಿಗೆಯನ್ನು ಭೇಟಿ ನೀಡಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ 9448953682, 9845522020 ನಂಬರಿಗೆ ಸಂಪರ್ಕಿಸಬಹುದು, ಷರತ್ತುಗಳು ಅನ್ವಯ ಎಂದು ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here