ಕೆಯ್ಯೂರು: ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಸೀನಾ ಬಾನು ಎಸ್.ಇ ಅವರು ಪದೋನ್ನತಿ ಹೊಂದಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಸರಕಾರಿ ಪದವಿಪೂರ್ವ ಕಾಲೇಜು) ಕೆಯ್ಯೂರು ಪ್ರಾಚಾರ್ಯರಾಗಿ ನೇಮಕಗೊಂಡಿದ್ದಾರೆ.
ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಇಸ್ಮಾಯಿಲ್ ಪಿ ಅವರು ನೂತನ ಪ್ರಾಚಾರ್ಯರಿಗೆ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು. ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು ಎಂ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
1996ರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿ ಉಪನ್ಯಾಸಕರಾಗಿ ಸರಕಾರಿ ಸೇವೆಗೆ ಸೇರಿ, ಕೆಪಿಎಸ್ ಬೆಳ್ಳಾರೆಯಲ್ಲಿ ಪ್ರಭಾರ ಪ್ರಾಚಾರ್ಯರಾಗಿಯೂ ಕರ್ತವ್ಯ ನಿರ್ವಹಿಸಿರುವ ಹಸೀನಾ ಬಾನು ಎಸ್ಇ. ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಎಂಎ ಹಿಂದಿ (1994) ದ್ವಿತೀಯ ರ್ಯಾಂಕ್ ವಿಜೇತರೂ ಆಗಿದ್ದಾರೆ.