ಪುತ್ತೂರು: ಕುಡಿಪ್ಪಾಡಿ ಗ್ರಾಮದ ಅರ್ಕ ಶ್ರೀ ನಾಗದೇವರು, ರಕ್ತೇಶ್ವರೀ, ಶ್ರೀ ಮಲರಾಯ, ಧೂಮಾವತಿ ಮತ್ತು ಪರಿವಾರ ದೈವಗಳ ಜೀರ್ಣೋದ್ದಾರ ಸಮಿತಿ ವತಿಯಿಂದ ಶ್ರೀ ನಾಗದೇವರು ಮತ್ತು ರಕ್ತೇಶ್ವರಿ ದೈವಗಳ ಪ್ರತಿಷ್ಠೆಯು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಕೆಮ್ಮಿಂಜೆ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ ಮೇ.19 ರಂದು ನೆರವೇರಿತು.

ಮೇ.18 ರಂದು ಸಂಜೆ ಸ್ಥಳ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವನದುರ್ಗಾ ಹೋಮ ಮತ್ತಿತರ ವೈದಿಕ ಕಾರ್ಯಕ್ರಮಗಳು ನಡೆದವು. ಮೇ.19 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಟಾ ಹೋಮ ನಡೆದು, ಕಲಶ ಪೂಜೆ, ತಿಲ ಹೋಮ, ನಾಗದೇವರು ಮತ್ತು ರಕ್ತೇಶ್ವರೀ ಗುಳಿಗ ದೈವಗಳ ಪ್ರತಿಷ್ಟೆ ನೆರವೇರಿತು. ನಂತರ ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ ನಡೆದು ಮಹಾಪೂಜೆ ನಡೆದು ಅನ್ನಸಂತರ್ಪಣೆ ಜರಗಿತು.
ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಬಿ. ರಾಧಾಕೃಷ್ಣ ಭಟ್ ಬಟ್ರುಪ್ಪಾಡಿ, ಅಧ್ಯಕ್ಷ ಸುಧೀರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಬುಳೇರಿಕಟ್ಟೆ, ಕೋಶಾಧಿಕಾರಿ ರಾಧಾಕೃಷ್ಣ ಪೂಜಾರಿ ಅರ್ಕ, ಉಪಾಧ್ಯಕ್ಷರಾದ ಕೇಶವ ಪೂಜಾರಿ ಪೆಲತ್ತಡಿ, ಜಯರಾಮ ನಾೖಕ್ ಅರ್ಕ, ಆನಂದ ಪೂಜಾರಿ ಅರ್ಕ, ಜತೆ ಕಾರ್ಯದರ್ಶಿಗಳಾದ ಶ್ರೀಧರ ಪೂಜಾರಿ ಅರ್ಕ, ನಾಗೇಶ ಪೂಜಾರಿ ಪೆಲತ್ತಡಿ, ನಾಗದೇವರ ಜಾಗದ ಮಾಲಕ ಕೆ. ವಿಜಯಕುಮಾರ್, ದೈವಗಳ ಜಾಗದ ಮಾಲಕ ಸೀತಾರಾಮ ನಾಯಕ್ ಅರ್ಕ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಕುಲಾಲ್ ಕುಟುಂಬಸ್ಥರು, ಸ್ಥಳೀಯ ಭಕ್ತಾಭಿಮಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.