ಯಕ್ಷ ಧ್ರುವ ಪಟ್ಲ ದಶಸಂಭ್ರಮ2025, ರಾಷ್ಟ್ರೀಯ ಕಲಾ ಸಮ್ಮೇಳನದ ಆಮಂತ್ರಣ ಬಂಟರ ಸಂಘಕ್ಕೆ ಹಸ್ತಾಂತರ

0

ಪುತ್ತೂರು: ಜೂ. 1 ರಂದು ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025, ರಾಷ್ಟ್ರೀಯ ಕಲಾ ಸಮ್ಮೇಳನದ ಆಮಂತ್ರಣ ಪತ್ರವನ್ನು ಮೇ 20 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿರವರು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರಿಗೆ ಹಸ್ತಾಂತರ ಮಾಡುವ ಮೂಲಕ, ಬಂಟ ಸಮಾಜ ಭಾಂದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ತಾಲ್ಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಕಡಮಜಲು ಸುಭಾಸ್ ರೈ, ರಮೇಶ್ ರೈ ಬೋಳೋಡಿ, ಪುರಂದರ ರೈ ಮಿತ್ರಂಪಾಡಿ, ಎನ್. ಚಂದ್ರಹಾಸ್ ಶೆಟ್ಟಿ, ಚನಿಲ ತಿಮ್ಮಪ್ಪ ಶೆಟ್ಟಿ, ಮೋಹನ್ ರೈ ನರಿಮೊಗರು, ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಸಂಜೀವ ಆಳ್ವ ಹಾರಾಡಿ, ಕಿಶೋರ್ ಶೆಟ್ಟಿ ಅರಿಯಡ್ಕ, ಜಯಕುಮಾರ್ ರೈ ಮಿತ್ರಂಪಾಡಿ, ನಾರಾಯಣ ರೈ ಬಾರಿಕೆ, ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂತೋಷ್ ಶೆಟ್ಟಿ ಸಾಜ, ಗಣೇಶ್ ರೈ ಬೂಡಿಯಾರ್, ಕೆ.ಎಸ್, ರವೀಂದ್ರನಾಥ ರೈ ಬಳ್ಳಮಜಲು, ಜಯಲಕ್ಷ್ಮೀ ಆರ್ ರೈ ಬೂಡಿಯಾರ್ , ಸುಧಾಮಣಿ ಜಿ.ರೈ ಬೂಡಿಯಾರ್, ರಕ್ಷತಾ ಶೆಟ್ಟಿ ಬೂಡಿಯಾರ್, ಪ್ರೀತಿ ಎಸ್ ರೈ ಕಡಮಜಲು, ತಾರಾ ಜೆ. ಭಂಡಾರಿ ಡಿಂಬ್ರಿ, ಸತೀಶ್ ರೈ ನಡುಬೈಲು, ಪುರಂದರ ಶೆಟ್ಟಿ ಮುಡಾಳ, ಜೀವನ್‌ದಾಸ್ ರೈ ಡೆಕ್ಕಳ, ಶ್ಯಾಮ್‌ಜೀತ್ ರೈ, ರಂಜಿನಿ ಶೆಟ್ಟಿ, ಅರುಣಾ ಪ್ರಜ್ವಲ್ ರೈ ಕೈಕಾರ, ಆನಂದ ರೈ ಡಿಂಬ್ರಿ ,ದೇವಿನ್ ಪ್ರಜ್ವಲ್ ರೈ ಉಪಸ್ಥಿತರಿದ್ದರು. ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ ಸ್ವಾಗತಿಸಿ, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ ವಂದಿಸಿದರು.

LEAVE A REPLY

Please enter your comment!
Please enter your name here