ವಿಟ್ಲ: ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಂಕೋಲಾದಲ್ಲಿ ಅಡ್ಡಗಟ್ಟಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಗಳ ಪೈಕಿ ಓರ್ವನ ಮನೆ ಕೇಪು ಕಲ್ಲಂಗಳದಲ್ಲಿದ್ದು, ಮೇ 20ರ ಮಂಗಳವಾರ ಕಾರವಾರ ಪೊಲೀಸರು ವಿಟ್ಲ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಿದ್ದಾರೆ.
ಈ ಪ್ರಕರಣ ಸಂಬಂಧಿಸಿದಂತೆ ಒಟ್ಟು 11 ಮಂದಿ ಭಾಗಿಯಾದ ಶಂಕೆಯಿದ್ದು, ಪೊಲೀಸ್ ಇಲಾಖೆ ತನಿಖೆಗೆ ನಡೆಸುತ್ತಿದೆ. ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 3 ಮಂದಿ ವಿದೇಶಕ್ಕೆ ಪಲಾಯನ ಮಾಡಿದ್ದು, ಕೇಪು ಕಲ್ಲಂಗಳ ನಿವಾಸಿ ಮಹಮ್ಮದ್ ಇಸಾಮ್ ಓರ್ವ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇಸಾಮ್ ಮನೆಯನ್ನು ಪೊಲೀಸರು ಸರ್ಚ್ ವಾರೆಂಟ್ ಮೇಲೆ ಪರಿಶೀಲಿಸಿ ಮಾಹಿತಿಗಾಗಿ ಹುಡುಕಾಡಿದರು. ಸುಮಾರು 2 ಗಂಟೆ ತನಿಖೆ ನಡೆಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ.