ವಿಟ್ಲ: ಪೆಟ್ರೋಲ್ ಬಂಕ್ ಗೆ ಬಂದ ಕಾರು ಚಾಲಕರು ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರರಾರಿಯಾದ ಸಂದರ್ಭ ಬೈಕ್ ಹಾಗೂ ಪಿಕಪ್ ವಾಹನಗಳಿಗೆ ಡಿಕ್ಕಿಯಾಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸಂಜೆ ವಿಟ್ಲ ಸಾಲೆತ್ತೂರು ಸಮೀಪದ ವಾಲ್ತಾಜೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದವರು ಹಿಂದಿ ಭಾಷಿಕರಾಗಿದ್ದು, ಪೆಟ್ರೋಲ್ ಹಾಕಿಸಿ ಹಣ ನೀಡದೇ ಸಾಲೆತ್ತೂರು ಮೂಲಕ ಪರಾರಿಯಾಗುತ್ತಿದ್ದಾಗ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಕಾರು ಡಿಕ್ಕಿಯಾಗಿದೆನ್ನಲಾಗಿದೆ.
ಸ್ಥಳಕ್ಕೆ 112 ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರು ಹಾಗೂ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.