ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರದ ಪುನರ್ ನಿರ್ಮಾಣಗೊಂಡ ನೂತನ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ಸಿದ್ಧಿವಿನಾಯಕ ದೇವರ ಛಾಯಾ ಬಿಂಬ ಪ್ರತಿಷ್ಟಾ ಮಹೋತ್ಸವವು ಮೇ 28 ರಿಂದ 30 ರವರೆಗೆ ವಿವಿಧ ಧಾರ್ಮಿಕ, ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಕಾರ್ಯಕ್ರಮದ ಚಪ್ಪರ ಮುಹೂರ್ತ ಮೇ 21 ರಂದು ನೆರವೇರಿತು.

ಪ್ರಗತಿಪರ ಕೃಷಿಕರಾದ ದೇರಣ್ಣ ರೈ ತಲೆಪ್ಪಾಡಿ ಚಪ್ಪರ ಮುಹೂರ್ತ ನೆರವೇರಿಸಿ ಶುಭ ಹಾರೈಸಿದರು. ಮಂದಿರ ಪುನರ್ ನಿರ್ಮಾಣ ಸಮಿತಿಯ ಗೌರವ ಸಲಹೆಗಾರ ಸಾಂತಪ್ಪ ಗೌಡ ಪಂಬೆಜಾಲು, ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು, ಉಪಾಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಜೊತೆಕಾರ್ಯದರ್ಶಿ ಲಿಂಗಪ್ಪ ಗೌಡ ಕಕ್ಕೂರು, ಸದಸ್ಯರಾದ ಶಿವಪ್ರಸಾದ್ ತಲೆಪ್ಪಾಡಿ, ಲಿಂಗಪ್ಪ ಗೌಡ ಪಂಬೆಜಾಲು, ಯತೀಂದ್ರನಾಥ ರೈ ಡೆಮ್ಮಂಗರ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ಚಪ್ಪರ ಸಮಿತಿಯ ಸಂಚಾಲಕ ಗಂಗಾಧರ ಗೌಡ ಪಂಬೆಜಾಲು, ಸದಸ್ಯರಾದ ಭೋಜಪ್ಪ ಗೌಡ ಮಿತ್ತಡ್ಕ, ಕೊರಗಪ್ಪ ವಿನಾಯಕನಗರ, ಶ್ರೀದೇವಿ ಶಾಮಿಯಾನದ ಮ್ಹಾಲಕ ಬಾಲಕೃಷ್ಣ ಕಕ್ಕೂರು ಮತ್ತಿತರರು ಉಪಸ್ಥಿತರಿದ್ದರು. ಸಾಂತಪ್ಪ ಗೌಡ ಪಂಬೆಜಾಲು ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜಯಪ್ರಕಾಶ್ ರೈ ಸ್ವಾಗತಿಸಿ, ವಂದಿಸಿದರು.