ಪುತ್ತೂರು: ಬಪ್ಪಳಿಗೆ ಮೂಲದ ಪುತ್ತೂರು ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಎ.ರಹಿಮಾನ್ (65ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಸ್ತುತ ಬನ್ನೂರು ನಿವಾಸಿಯಾಗಿದ್ದ ಇವರು ಹಿರಿಯ ಕಾಂಗ್ರೆಸಿಗರಾಗಿದ್ದು,ಈ ಹಿಂದೆ ಪುರಸಭಾ ಸದಸ್ಯರಾಗಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಪ್ಪಳಿಗೆ ಮಸೀದಿ ಮದ್ರಸ ಕಮಿಟಿಯ ಅಧ್ಯಕ್ಷರಾಗಿ, ಪುತ್ತೂರು ಜಮೀಯತ್ತುಲ್ ಫಲಾಹ್ ಘಟಕದ ಅಜೀವ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.