ನಾಳೆ(ಮೇ.22) ಪಡೀಲ್‌ನಲ್ಲಿ ವಿಘ್ನೇಶ್ವರ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ ಶುಭಾರಂಭ

0

ಪುತ್ತೂರು: ಕಳೆದ 28 ವರ್ಷಗಳಲ್ಲಿ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಸ್ಟೀಲ್ಸ್ ಹಾರ್ಡ್‌ವೇರ್ ಮಾರಾಟ ಕ್ಷೇತ್ರದಲ್ಲಿ ಜನಪ್ರಿಯ ಸಂಸ್ಥೆಯಾಗಿ ಬೆಳೆದು ಬಂದಿರುವ ಉದ್ಯಮಿ ಸುಧಿರ್ ಶೆಟ್ಟಿ ತೆಂಕಿಲ ಇವರ ಮಾಲಕತ್ವದ ಬಹುಮಹಡಿ ವಾಣಿಜ್ಯ ಸಂಕೀರ್ಣ ’ವಿಘ್ನೇಶ್ವರ ಕಾಂಪ್ಲೆಕ್ಸ್’ ಮೇ.22 ರಂದು ಪಡೀಲ್ ನಲ್ಲಿ ಶುಭಾರಂಭಗೊಳ್ಳಲಿದೆ.


1997ರಲ್ಲಿ ವಿಘ್ನೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಪಡೀಲ್‌ನ ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕನಸಿನ ಉದ್ಯಮಕ್ಕೆ ಮುನ್ನುಡಿ ಬರೆದ ಸುಧಿರ್ ಶೆಟ್ಟಿಯವರ ಉದ್ಯಮವು 2018 ರಲ್ಲಿ ಪಡೀಲ್ ನ ತನ್ನ ಸ್ವಂತ ಕಟ್ಟಡದಲ್ಲಿ ವಿಘ್ನೇಶ್ವರ ಸ್ಟೀಲ್ಸ್ ಆಂಡ್ ಹಾರ್ಡ್‌ವೇರ್ ಎಂಬ ಹೆಸರಿನಲ್ಲಿ ಮಾರಾಟ ಮತ್ತು ಸೇವೆಯನ್ನು ಒದಗಿಸುವ ಹೊಸ ಸಂಸ್ಥೆಯಾಗಿ ಮಾರ್ಪಾಡುಗೊಂಡಿತು. ಇದೀಗ ಅವರ ಉದ್ಯಮ ಕ್ಷೇತ್ರಕ್ಕೆ ಮತ್ತೊಂದು ಸೇರ್ಪಡೆಯಾಗಿ, ನೂತನ ವಾಣಿಜ್ಯ ಸಂಕೀರ್ಣ ಪುತ್ತೂರಿನ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಲು ಸಿದ್ಧವಾಗಿದೆ.


ಕಾಂಪ್ಲೆಕ್ಸ್‌ನ ವಿಶೇಷತೆಗಳು:
ಈ ವಾಣಿಜ್ಯ ಸಂಕೀರ್ಣ ಒಟ್ಟು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತು + 3 ಬಹುಮಹಡಿಯ ಕಾಂಪ್ಲೆಕ್ಸ್ ಇದಾಗಿದೆ. ಸಂಪೂರ್ಣ ಟೈಲ್ಸ್ ಹಾಸುವಿಕೆಯ ನೆಲ, ಪ್ರತೀ ಅಂತಸ್ತಿಗೂ ಲಿಫ್ಟ್ ಸೌಲಭ್ಯ ಇದೆ. ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಈಗಾಗಲೇ ನೂತನ ವಾಣಿಜ್ಯ ಸಂಕೀರ್ಣದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ದಂತ ಚಿಕಿತ್ಸಾಲಯ, ಬ್ಯೂಟಿಪಾರ್ಲರ್‌ಗಳು ತೆರೆದಿದ್ದು, ಸೊಸೈಟಿ ಮತ್ತಿತರ ಕಚೇರಿಗಳಿಗೆ ಯೋಗ್ಯವಾದ ಕೊಠಡಿಗಳನ್ನು ಹೊಂದಿದೆ. ತೆರೆದ ಬಾವಿಯ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಪಡೀಲ್ ಜಂಕ್ಷನ್‌ನಲ್ಲಿ ನೂತನ ಕಾಂಪ್ಲೆಕ್ಸ್ ನಿರ್ಮಾಣಗೊಂಡಿದಸ್ದು, ಪುತ್ತೂರಿನ ವಾಣಿಜ್ಯ ಕ್ಷೇತ್ರ ಬೆಳವಣಿಗೆಗೆ ಕೊಡುಗೆಯಾಗಿ ಕಂಗೊಳಿಸುತ್ತಿದೆ.‌


ಶುಭಾರಂಭದ ಪ್ರಯುಕ್ತ ಯಕ್ಷಗಾನ ಶ್ರೀದೇವಿ ಮಹಾತ್ಮೆ:
ನೂತನ ಕಾಂಪ್ಲೆಕ್ಸ್ ನ ಉದ್ಘಾಟನೆ ಮೇ.22 ರಂದು ಸಂಜೆ ನಡೆಯಲಿದೆ. ಸುಽರ್ ಶೆಟ್ಟಿಯವರ ತೀರ್ಥರೂಪರಾದ ದಯಾನಂದ ಶೆಟ್ಟಿ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಶುಭಾರಂಭದ ಪ್ರಯುಕ್ತ ಸಂಜೆ 6 ಗಂಟೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಶ್ರೀ ದೇವಿ ಮಹಾತ್ನೆ’ ಯಕ್ಷಗಾನ ಬಯಲಾಟ ನಡೆಯಲಿದೆ.

ಲೈವ್
ವಿಘ್ನೇಶ್ವರ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ ಶುಭಾರಂಭ‌ದ ಸಂಪೂರ್ಣ ಕಾರ್ಯಕ್ರಮವನ್ನು ಸುದ್ದಿ‌ ಬಿಡುಗಡೆ, ಅಕ್ಕರೆ ನ್ಯೂಸ್‌ ಲೈವ್‌ ನಲ್ಲಿ ಕಾಣಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಸೊಸೈಟಿ ಮತ್ತಿತರ ಕಚೇರಿಗಳಿಗೆ ಯೋಗ್ಯವಾದ ಕೊಠಡಿಗಳನ್ನು ಹೊಂದಿರುವ ಈ ಬಹುಮಹಡಿ ಸಂಕೀರ್ಣವು ಲಿಫ್ಟ್ ಸೌಲಭ್ಯ ಹೊಂದಿದೆ. ತೆರೆದ ಬಾವಿಯ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಪುತ್ತೂರು ನಗರ ವಿಸ್ತಾರದ ದೃಷ್ಟಿಯಲ್ಲಿ ಪಡೀಲ್ ಜಂಕ್ಷನ್ ನಲ್ಲಿ ನೂತನ ಕಾಂಪ್ಲೆಕ್ಸ್ ಪುತ್ತೂರಿನ ವಾಣಿಜ್ಯ ಕ್ಷೇತ್ರ ಬೆಳವಣಿಗೆಗೆ ಕೊಡುಗೆ ನೀಡಲು ಸಿದ್ದವಾಗಿದೆ. -ಸುಧಿರ್ ಶೆಟ್ಟಿ ಮತ್ತು ಫ್ಯಾಮಿಲಿ

-ಸುಧಿರ್ ಶೆಟ್ಟಿ ಮತ್ತು ಫ್ಯಾಮಿಲಿ

LEAVE A REPLY

Please enter your comment!
Please enter your name here