ಪುತ್ತೂರು : ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಶೈಕ್ಷಣಿಕ ಪದ್ಧತಿಗೆ ಪೂರಕವಾದ ವಾತಾವರಣವನ್ನು ನೀಡುವಲ್ಲಿ ಡಿಪ್ಲೋಮ ಪದವಿ ಉತ್ತಮ ಶೈಕ್ಷಣಿಕ ಕ್ಷೇತ್ರವಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾದ ಪಠ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತಾ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕೆಲಸ ಮಾಡುತ್ತಿದೆ.
S. S. L. C ಯ ನಂತರ ಇಂಜಿನಿಯರಿಂಗ್ ಪದವಿಗೆ ಪೂರಕ ವಾತಾವರಣವನ್ನು ಸುಲಭದಲ್ಲಿ ವಿದ್ಯಾರ್ಥಿಗಳಲ್ಲಿ ಗ್ರಹಿಸುವ ಸಾಮರ್ಥ್ಯವನ್ನು ಡಿಪ್ಲೋಮ ಪದವಿ ನೀಡುತ್ತಿದೆ.
ಸ್ಪರ್ಧಾತ್ಮಕ ವಾತಾವರಣದಲ್ಲಿ ಉತ್ತಮ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆಯಲು ಪೂರಕ ಜ್ಞಾನವನ್ನು ಡಿಪ್ಲೋಮಾ ಪದವಿ ನೀಡುತ್ತಿದೆ. ಭವಿಷ್ಯದಲ್ಲಿ ಉತ್ತಮ ಅನುಭವಕ್ಕಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಆಧುನಿಕ ತಂತ್ರಜ್ಞಾನದ ಪ್ರಸ್ತುತ ಬೆಳವಣಿಗೆಗಳ ಅದರಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳ ಅವಶ್ಯಕತೆ ಮೊದಲಾದ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನದ ಅನುಭವಕ್ಕಾಗಿ ನುರಿತ ಅಧ್ಯಾಪಕರಿಂದ ಬೋಧನೆ ಹಾಗೂ ಶಿಕ್ಷಣವನ್ನು ನೀಡಲಾಗುತ್ತದೆ. ಪಠ್ಯಕ್ರಮದೊಂದಿಗೆ ಸಾಮಾಜಿಕ ಜ್ಞಾನ ಹಾಗೂ ಮೌಲ್ಯಯುತ ಜೀವನವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದಕ್ಕಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಹೀಗೆ ಪುತ್ತೂರಿನ ಹೆಮ್ಮೆಯ ವಿವೇಕಾನಂದ ಪಾರಿಟೆಕ್ನಿಕ್ ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ಅನೇಕ ಗರಿಗಳನ್ನು ತನ್ನ ತುರುಬಿಗೆ ಸೇರಿಸಿಕೊಂಡಿದೆ. ಉತ್ತಮ ಭವಿಷ್ಯಕ್ಕಾಗಿ ನಿಮ್ಮ ಆಯ್ಕೆ ಡಿಪ್ಲೋಮಾ ಆಗಿರಲಿ ತಂತ್ರಜ್ಞಾನದ ಅರಿವನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಲು ನಿರಂತರವಾಗಿ ನೈಪುಣ್ಯ ತರಬೇತಿಗಳನ್ನು ನೀಡಲಾಗುತ್ತದೆ.