ಇರ್ವತ್ತೂರು ಪದವು: ಮದ್ರಸ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ವಿರುದ್ಧ ಹೋರಾಟ

0

ಇರ್ವತ್ತೂರು ಪದವು: ಮದರಸತು ದೀನಿಯ್ಯಾ ಇರ್ವತ್ತೂರು ಪದವು ಮದರಸ ವಿದ್ಯಾರ್ಥಿಗಳ “ಅನಾಹುತಗಳಿಂದ ಎಚ್ಚರ!” ಎಂಬ ಸಂದೇಶದೊಂದಿಗೆ ಮಾದಕ ವಸ್ತುಗಳ ವಿರುದ್ಧ ಹೋರಾಟ ಮಗ್ರಿಬ್ ನಮಾಝಿನ ಬಳಿಕ ಮದರಸ ಮುಂಭಾಗದಲ್ಲಿ ನಡೆಸಲಾಯಿತು.


ಕಾರ್ಯಕ್ರಮವನ್ನು ಸದರ್ ಉಸ್ತಾದರಾದ ಶರ್ವಾನ್ ಸ‌ಅದಿ ಕಾಜೂರ್ ರವರು ದುಆಃ ನೇತೃತ್ವದ ಮೂಲಕ ಚಾಲನೆಯನ್ನು ನೀಡಿದರು. ಅಶ್ಫಾಕ್ ಸ ಅದಿ ಕಟ್ಟತ್ತಾರ್ ಕಾರ್ಯಕ್ರಮ ಉದ್ಘಾಟಿಸಿ
ಇಂದಿನ ಸಮಾಜದಲ್ಲಿ ದಿನ ನಿತ್ಯ ಹೆಚ್ಚುತ್ತಿರುವ ಲಹರಿಗಳ ಉಪಯೋಗದಿಂದ ಅನಾಹುತಗಳ ಸಂಭವಿಸುತ್ತದೆ. ಅಸ್ಪಷ್ಟ ನಾಮಗಳಲ್ಲಿ ದ್ರವ್ಯ ,ಮಾತ್ರೆ, ತಿನಿಸುಗಳ ರೂಪದಲ್ಲಿ ಹಬ್ಬಿರುವ ಡ್ರಗ್ಸ್ ಯುವ ಪೀಳಿಗೆಯನ್ನು ಆವರಿಸಿದೆ. ಆದುದರಿಂದ ನಾವುಗಳು ಎಚ್ಚರಿಕೆಯಿಂದ ಇದ್ದು ಸಂಪೂರ್ಣ ಜಾಗರೂಕರಾಗಬೇಕೆಂಬ ಉತ್ತಮ ಸಂದೇಶ ನೀಡಿದರು.


ವಿವಿಧ ತರಹದ ಮಾದಕ ವಸ್ತುಗಳು, ಕಾಲೇಜ್ ಕ್ಯಾಂಪಸ್ ಗಳನ್ನು ಆವರಿಸಿ, ವಿದ್ಯಾರ್ಥಿಗಳು ಲಹರಿಗೆ ಬಲಿಯಾಗಿ ಮಾನವ ಕುಲವನ್ನು ನಾಶ ಮಾಡುವ ಮಾರಕವಾಗಿದೆ ಉದಾತ್ತ ಎಚ್ಚರಿಕೆಯನ್ನು ಎಸ್.ಬಿ.ಎಸ್ ಇರ್ವತ್ತೂರು ಪದವು ಇದರ ಉಪಾಧ್ಯಕ್ಷರಾದ ಫಝಲ್ ರವರು ವಿವರಣೆ ನೀಡಿದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಮುನೀರ್ ಅಹ್ಮದ್ , ಬದ್ರುದ್ದೀನ್,ಅಧ್ಯಕ್ಷರಾದ ಸೇವಾ ಹಾಮದ್, ಸಾದಿಕ್ ಕಲಾಬಾಗಿಲು, ಎಸ್. ಎಂ. ಸತ್ತಾರ್ , ಸಲಾಂ ಮೇಸ್ತ್ರಿ ,ಅಬುಸಾಲಿ, ಟಿ. ಮೊಹಮ್ಮದ್, ಮತ್ತಿತರರು ಉಪಸ್ಥಿತರಿದ್ದರು. ಮುಹಮ್ಮದ್ ಅಲ್ಫಾಝ್ ರವರು ಮಾದಕ ದ್ರವ್ಯಗಳ ವಿರುದ್ಧ ಪ್ರತಿಜ್ಞೆಯನ್ನು ನೆರವೇರಿಸಿ, ಸ್ವಾಗತಿಸಿ ವಂದಿಸಿದರು. ಮೂರು ಸ್ವಲಾತಿನ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

LEAVE A REPLY

Please enter your comment!
Please enter your name here