ಮುಂಡೂರಿನಲ್ಲಿ ಮೇಳೈಸಿದ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾರಂಭ

0

ಸ್ವ ಸಹಾಯ ಸಂಘದ ಪದಗ್ರಹಣ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ

ಪುತ್ತೂರು: ಒಕ್ಕಲಿಗಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು, ಯುವ ಒಕ್ಕಲಿಗ ಗೌಡ ಸಂಘ, ಗ್ರಾಮ ಸಮಿತಿ, ಒಕ್ಕಲಿಗ ಗೌಡ ಮಹಿಳಾ ಸಂಘ ಮುಂಡೂರು ಗ್ರಾಮ ಸಮಿತಿ, ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ಮುಂಡೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ.18ರಂದು ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ನಡೆದ ವಾರ್ಷಿಕ ಸಮಾರಂಭ, ಪುಸ್ತಕ ವಿತರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಪದಗ್ರಹಣ ಸಮಾರಂಭಗಳು ಸಂಭ್ರಮ ಮನೆ ಮಾಡಿತು.


ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಗ್ರಾಮ ಸಮಿತಿಯ ಕಾರ್ಯಕ್ರಮಗಳ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಮುಂಡೂರು ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಗೌಡ ನಡುಬೈಲು, ಉಮೇಶ್ ಗೌಡ ಗುತ್ತಿನಪಾಲು, ಜಗದೀಶ್ ಗೌಡ ಹಿಂದಾರು, ಸುಧಾಕರ ಗೌಡ ಪಜಿಮಣ್ಣು, ನಳಿನಿ ಪಜಿಮಣ್ಣು ಉಪಸ್ಥಿತರಿದ್ದರು.


ಉದ್ಘಾಟನಾ ಕಾರ್ಯಕ್ರಮದ ಬಳಿಕ ವಾರ್ಷಿಕ ಸಮಾರಂಭದ ಅಂಗವಾಗಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಪ್ರತ್ಯೇಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಗುಂಪು ಸ್ಪರ್ಧೆಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳು ನಡೆಯಿತು. ನೂರಾರು ಮಂದಿ ಸಮಾಜ ಬಾಂಧವರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಸ್ಪರ್ಧೆಯ ಜೊತೆಗೆ ಮನರಂಜನೆಯು ನೀಡಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಮುಂಡೂರು ಗ್ರಾಮ ಸಮಿತಿ ಅಧ್ಯಕ್ಷ ಮೋಹನ ಗೌಡ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ರವಿ ಮುಂಗ್ಲಿಮನೆ, ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಾರಿಜ ಬೆಳೆಯಪ್ಪಗೌಡ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಉಪಾಧ್ಯಕ್ಷ ಎ.ವಿ ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಂ., ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಗೌಡ ನಡುಬೈಲು, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮುಂಡೂರು ವಲಯಾಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ಮುಂಡೂರು ಗ್ರಾಮ ಸಮಿತಿ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸಂಪ್ರೀತ್ ಕಡ್ಯ, ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಪಜಿಮಣ್ಣು ಹಾಗೂ ಒಕ್ಕಲಿಗ ಗೌಡ ಸ್ವ-ಸಹಾಯ ಒಕ್ಕೂಟದ ಅಧ್ಯಕ್ಷ ಸುಧಾಕರ ಗೌಡ ಪಜಿಮಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ, ಸನ್ಮಾನ:
ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಸಾಧನೆಗೈದ ಧನ್ವಿ ಎ.ಆರ್ ಅಂಬಟ ಹಾಗೂ ತೇಜಸ್ ಗುತ್ತಿನಪಾಲು ಇವರನ್ನು ಸನ್ಮಾನಿಸಲಾಯಿತು. ಸಮಾಜದ ಹಿರಿಯರಾದ ರಾಮಯ್ಯ ಗೌಡ ಗುತ್ತಿನಪಾಲು, ಪದ್ಮಾವತಿ ಬಾವಿಕಟ್ಟೆ , ಲೀಲಾವತಿ ನಡುಬೈಲು ಮತ್ತು ವೆಂಕಮ್ಮ ತೌಡಿಂಜ ಹಾಗೂ ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಗೌಡ ಪಜಿಮಣ್ಣು, ನಿರ್ದೇಶಕರಾದ ಜಗದೀಶ್ ಗೌಡ ಬನಾರಿ, ರಾಜೇಶ್ ಗೌಡ ಅಂಬಟ ಮತ್ತು ಚೇತನಾ ಹಿಂದಾರು ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗಿನ ಮುಂಡೂರು ಗ್ರಾಮದ ಸ್ವ ಜಾತಿ ಬಾಂಧವರ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ವಾರ್ಷಿಕ ಸಮಾರಂಭದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಒಕ್ಕೂಟದ ಪದಗ್ರಹಣ:
ಸಮಾರಂಭದಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ನಡೆದಿದ್ದು ನೂತನ ಅಧ್ಯಕ್ಷ ನಾರಾಯಣ ಗೌಡ ಕೊಂಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯ ಅಂಬಟ, ಉಪಾಧ್ಯಕ್ಷೆಯಾಗಿ ವನಿತಾ ತೌಡಿಂಜ, ಜತೆ ಕಾರ್ಯದರ್ಶಿಯಾಗಿ ವನಿತಾ ಪಜಿಮಣ್ಣು ಹಾಗೂ ಕೋಶಾಧಿಕಾರಿ ವಿಮಲ ಗುತ್ತಿನಪಾಲು ಪದಸ್ವೀಕಾರ ಮಾಡಿದರು. ಅಧ್ಯಕ್ಷ ಸುಧಾಕರ ಗೌಡ ಪಜಿಮಣ್ಣು ಪದಗ್ರಹಣ ನೆರವೇರಿಸಿದರು.


ದೀಕ್ಷಾ ತೌಡಿಂಜ ಸ್ವಾಗತಿಸಿ, ಅಶೋಕ್ ಅಂಬಟ ವಂದಿಸಿದರು. ಅನ್ವಿತಾ ಹಾಗೂ ಧನ್ವಿತಾ ಪ್ರಾರ್ಥಿಸಿದರು. ಸುಕನ್ಯಾ ಕಡ್ಯ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಗೌಡ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here