ಹಿರೇಬಂಡಾಡಿ: ಬಿರುಗಾಳಿಗೆ ವ್ಯಾಪಕ ಕೃಷಿ ಹಾನಿ

0

ಧರೆಗುರುಳಿದ ಅಡಿಕೆ, ತೆಂಗಿನ ಮರ | ವಿದ್ಯುತ್ ಕಂಬಗಳೂ ಜಖಂ

ಹಿರೇಬಂಡಾಡಿ: ಮೇ.25ರಂದು ಸಂಜೆ ಧಾರಾಕಾರ ಮಳೆಯಿಂದ ಬೀಸಿದ ಬಿರುಗಾಳಿಗೆ ಹಿರೇಬಂಡಾಡಿ ಗ್ರಾಮದ ಹಲವೆಡೆ ವ್ಯಾಪಕ ಹಾನಿ ಸಂಭವಿಸಿದೆ.


ಬಿರುಗಾಳಿಗೆ ಹಲವು ಕಡೆಗಳಲ್ಲಿ ಅಡಿಕೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಬೊಲುಂಬುಡ ಫಾರೂಕ್ ಎಂಬವರ ತೋಟದಲ್ಲಿ 50 ಅಡಿಕೆ ಮರ, ತೆಂಗಿನ ಮರಗಳು ಮುರಿದು ಬಿದ್ದಿವೆ. ಇವರ ಇತರೇ ಕೃಷಿಗೂ ಹಾನಿಯಾಗಿದೆ.

ಧನಂಜಯ ಕೆದಗೆದಡಿ ಎಂಬವರ ತೋಟದಲ್ಲಿ 50 ಅಡಿಕೆ ಮರ, 2 ತೆಂಗಿನಮರ, ಬೃಹತ್ ಮರಗಳು ಮುರಿದು ಬಿದ್ದಿವೆ. ಜನಾರ್ದನ ಕೆದಗೆದಡಿ ಅವರ ಮನೆಯ ಸಿಮೆಂಟ್ ಶೀಟ್ ಹಾನಿಗೊಂಡಿದೆ. 450ಕ್ಕೂ ಹೆಚ್ಚು ಅಡಿಕೆ ಮರ, ತೆಂಗಿನ ಮರಗಳು ಹಾಗೂ ಬೃಹತ್ ಮರಗಳು ಬುಡಸಮೇತ ಮುರಿದು ಬಿದ್ದಿವೆ.

ರುಕ್ಮಿಣಿ ಮಜಿಕುಡೇಲು ಇವರ ಮನೆಯ ಹಂಚುಗಳು ಹಾರಿಹೋಗಿವೆ. ನೀರಿನ ಟ್ಯಾಂಕ್ ಹಾನಿಗೊಂಡಿದೆ. ಇವರ ಸುಮಾರು 600 ಅಡಿಕೆ ಗಿಡ, 10 ತೆಂಗಿನ ಮರ ಬಿದ್ದಿವೆ. ಅಡಿಕೆ ಒಣಗಿಸಲು ಮಾಡಿದ್ದ ಸೋಲಾರ್ ಗಾಳಿಗೆ ಹಾರಿ ಹೋಗಿದೆ ಎಂದು ವರದಿಯಾಗಿದೆ.

ಹೊನ್ನಪ್ಪ ಬರಮೇಲು ಅವರ 100 ಅಡಿಕೆ ಮರ, ತೆಂಗಿನ ಮರಗಳು ಮುರಿದು ಬಿದ್ದಿವೆ. ದಿನೇಶ ಕೆದಗೆದಡಿ, ಚಿದಾನಂದ ಕೆದಗೆದಡಿ ಹಾಗೂ ಇತರೇ ಹಲವರ ಅಡಿಕೆ ತೋಟದಲ್ಲಿ ಅಡಿಕೆ, ತೆಂಗು,ಬಾಳೆಗಿಡಗಳು ನೆಲಕ್ಕುರುಲಿವೆ. ಈ ಭಾಗದಲ್ಲಿ ನಾಲ್ಕು ವಿದ್ಯುತ್ ಕಂಬಗಳೂ ಮುರಿದು ಬಿದ್ದಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here