ಸಾಯ ಸಂಸ್ಥೆಯಿಂದ ಗುಣಮಟ್ಟದ, ನಗುಮುಖದ ಸೇವೆ-ಪ್ರಕಾಶ್ ಕಾರಂತ್
ಪುತ್ತೂರು:ದ.ಕ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದಿರುವ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಸಂಸ್ಥೆಯ ಪ್ರಧಾನ ಸಂಸ್ಥೆಯಾಗಿರುವ ಸಾಯ ಎಂಟರ್ ಪ್ರೈಸಸ್ ಇದರ 14ನೇ ಶಾಖೆಯ ಉದ್ಘಾಟನೆಯು ನ. 7 ರಂದು ಬಂಟ್ವಾಳ ಬೈಪಾಸ್ ರಸ್ತೆಯ ಅಜೇಕಳ ಮಹಲ್ತೋಟ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು.
ಸಾಯ ಸಂಸ್ಥೆಯಿಂದ ಗುಣಮಟ್ಟದ, ನಗುಮುಖದ ಸೇವೆ-ಪ್ರಕಾಶ್ ಕಾರಂತ್:
ಪ್ರಗತಿಪರ ಕೃಷಿಕ ಹಾಗೂ ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರು, ಉತ್ತಮ ಸೇವೆ ನೀಡುತ್ತಿರುವ ಸಾಯ ಸಂಸ್ಥೆಯು ಪುತ್ತೂರಿನಲ್ಲಿ ತನ್ನ ಗುಣಮಟ್ಟದ ಹಾಗೂ ನಗುಮುಖದ ಸೇವೆಯ ಮೂಲಕ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತಿದೆ. ಸಂಸ್ಥೆಯ ಮಾಲಕ ಗೋವಿಂದ ಪ್ರಕಾಶ್ ಸಾಯರವರ ಮುಂದಾಳತ್ವ, ಸಿಬ್ಬಂದಿಗಳ ಸಹಕಾರದಿಂದ ಇಂದು ಹಲವು ಕಡೆ ತನ್ನ ಶಾಖೆಗಳನ್ನು ವಿಸ್ತರಿಸಿದೆ. ಇದೀಗ ಬಂಟ್ವಾಳ ಭಾಗದ ಜನರಿಗೆ ತಮ್ಮ ಸೇವೆ ಲಭ್ಯವಾಗಲೆಂದು ಈ ಭಾಗದಲ್ಲಿ ಗೋವಿಂದಪ್ರಕಾಶ್ ಸಾಯರವರು ತನ್ನ ಸಂಸ್ಥೆಯನ್ನು ವಿಸ್ತರಿಸಿದ್ದಾರೆ ಜೊತೆಗೆ ಗೋವಿಂದ ಪ್ರಕಾಶ ಸಾಯರವರು ರೋಟರಿ ಪುತ್ತೂರು ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿ ಸಂಸ್ಥೆಯು ಇನ್ನಷ್ಟು ವಿಸ್ತರಿಸಲಿ, ಸಂಸ್ಥೆಯು ಮತ್ತಷ್ಟು ಶಾಖೆಗಳನ್ನು ವಿಸ್ತರಿಸುತ್ತಾ ಎಲ್ಲರಿಗೂ ಅವರ ಸೇವೆ ಸಿಗುವಂತಾಗಲಿ ಎಂದರು.
ಸಾಯ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗೋವಿಂದ ಪ್ರಕಾಶ್ ಸಾಯರವರು ಅತಿಥಿಗಳನ್ನು ಸ್ವಾಗತಿಸಿ, ಸಂಧ್ಯಾ ಸಾಯ ವಂದಿಸಿದರು. ಸಂಸ್ಥೆಯ ನಿರ್ದೇಶಕರಾಗಿರುವ ಪ್ರಜ್ವಲ್ ಸಾಯ ವಿವಿಧ ಮಾದರಿಯ ಯಂತ್ರಗಳನ್ನು ಪರಿಚಯಿಸಿದರು. ಮಹಲ್ತೋಟ ಸಂಕೀರ್ಣದ ಮಾಲಕರಾದ ಅವಿಲ್ ಮಿನೇಜಸ್ ಅವರು ಶುಭ ಹಾರೈಸಿದರು. ಸಾಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥರಾಗಿರುವ ರಾಜನಾರಾಯಣ ವಿಟ್ಲ, ಬಂಧುಗಳಾಗಿರುವ ಮಂಗಳೂರಿನ ಗುರುರಾಜ ರಾವ್ ,ಮಾಯಾ ಗುರೂರಾಜ ರಾವ್ ಹಾಗೂ ತೋಟಗಾರಿಕೆ ನಿರ್ದೇಶಕರಾಗಿರುವ ಪ್ರದೀಪ್ ಡಿಸೋಜ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಯ ಸಂಸ್ಥೆಯ ಸಿಬ್ಬಂದಿಗಳಾದ ಮೋಹಿತ್ ಎನ್, ಉಮಾವತಿ, ಗೋಪಾಲಕೃಷ್ಣ ,ಉಲ್ಲಾಸ್, ಆದಿತ್ಯ, ವಿಶ್ವನಾಥ್ ,ಪವನ್ ಜೊತೆಗಿದ್ದು ಸಹಕರಿಸಿದರು.
ಗ್ರಾಹಕರು ಪ್ರೋತ್ಸಾಹಿಸಿ ಆಶೀರ್ವದಿಸಿ..
ನಮ್ಮ ಸಂಸ್ಥೆಯ ಅಭ್ಯುದಯಕ್ಕೆ ಕಾರಣ ನಮ್ಮ ಹೆಮ್ಮೆಯ ಗ್ರಾಹಕರು. ಗ್ರಾಹಕರು ನಮ್ಮ ಸಂಸ್ಥೆಯ ಮೇಲಿಟ್ಟ ವಿಶ್ವಾಸ, ಭರವಸೆಯೇ ನಮ್ಮ ಏಳಿಗೆಗೆ ಕಾರಣವಾಗಿದ್ದು ಜೊತೆಗೆ ನಮ್ಮ ಸಿಬ್ಬಂದಿಗಳ ಕಾರ್ಯವೈಖರಿ ಕೂಡ ಕಾರಣವಾಗಿದೆ. ಪುತ್ತೂರು ಸೇರಿದಂತೆ ನಮ್ಮ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಹೇಗೆ ಗ್ರಾಹಕರು ಪ್ರೋತ್ಸಾಹ ನೀಡಿ ನಮ್ಮನ್ನು ಹರಸಿದ್ದಾರೋ ಹಾಗೆಯೇ ಬಂಟ್ವಾಳ ಪರಿಸರದಲ್ಲೂ ಗ್ರಾಹಕರು ನಮ್ಮನ್ನು ಪ್ರೋತ್ಸಾಹಿಸಿ ಆಶೀರ್ವದಿಸಿ. ಹೆಚ್ಚಿನ ಮಾಹಿತಿಗಾಗಿ 9901497852 ನಂಬರಿಗೆ ಸಂಪರ್ಕಿಸಬಹುದು.
-ಗೋವಿಂದಪ್ರಕಾಶ್ ಸಾಯ, ಮ್ಯಾನೇಜಿಂಗ್ ಡೈರೆಕ್ಟರ್, ಸಾಯ ಸಮೂಹ ಸಂಸ್ಥೆಗಳು