ನಿಡ್ಪಳ್ಳಿ: ರೆಂಜ ಮುಡ್ಪಿನಡ್ಕ ಮುಖ್ಯ ರಸ್ತೆಯ ರೆಂಜ ಎಂಬಲ್ಲಿ ಬರೆ ಕುಸಿದು ರಸ್ತೆ ಬದಿ ಚರಂಡಿ ಬಂದ್ ಆಗಿದೆ.
ಚರಂಡಿ ಬಂದ್ ಆದ ಕಾರಣ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಣ್ಣು ಇನ್ನೂ ಕುಸಿದು ಬೀಳುವ ಹಂತದಲ್ಲಿದೆ. ಮೇಲೆ ಇರುವ ಮರ ಒಂದು ರಸ್ತೆಗೆ ಬೀಳುವ ಸ್ಥಿತಿಯಲ್ಲಿ ಬಾಗಿ ನಿಂತಿದ್ದು ಅಪಾಯದ ಸ್ಥಿತಿಯಲ್ಲಿದೆ.