ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಕುಂಬ್ರ ವಲಯ ಹಾಗು ವಿಖಾಯ ಕುಂಬ್ರ ವಲಯ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ತಿಂಗಳಾಡಿ ಶಂಸುಲ್ ಉಲಮಾ ಎಜುಕೇಶನ್ ಸೆಂಟರ್‌ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಮೆಡಿಕಲ್ ಆಫೀಸರ್ ಡಾ.ಕೆ. ಸೀತಾರಾಮ ಭಟ್ ಉದ್ಘಾಟಿಸಿದರು.
ಎಸ್ಕೆಎಸ್ಸೆಸ್ಸೆಫ್ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಲಯಾಧ್ಯಕ್ಷ ಮನ್ಸೂರ್ ಅಸ್ಲಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಮಹಮ್ಮದ್ ನವವಿ, ಟ್ರಸ್ಟ್ ಕೇರ್ ತಿಂಗಳಾಡಿ ವೈದ್ಯ ಮಹಮ್ಮದ್ ಆಲಿ ಮಾತನಾಡಿದರು.
ಸಭೆಯಲ್ಲಿ ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಜಿಸ್ತಿಯಾ ಅಧ್ಯಾಪಕರಾದ ಅಬ್ದುಲ್ ಸತ್ತಾರ್ ಕೌಸರಿ, ಶಂಸುಲ್ ಉಲಮಾ ಎಜುಕೇಶನ್ ಸೆಂಟರ್ ಗೌರವಾದ್ಯಕ್ಷ ಮಹಮ್ಮದ್ ಹಾಜಿ ಸಂತೋಷ್, ವಲಯ ಸರ್ಗಲಯ ಚೆಯರ್ಮೇನ್ ನೌಫಲ್ ಅಜ್ಜಿಕಲ್ಲು, ಇಬಾದ್ ಚೆಯರ್ಮೇನ್ ಕಲಂದರ್ ಹನೀಫ್ ದಾರಿಮಿ, ಮೀಡಿಯಾ ವಿಂಗ್ ಚೆಯರ್ಮೇನ್ ಝಕರಿಯಾ ಮುಸ್ಲಿಯಾರ್, ವಲಯ ವಿಖಾಯ ಚೆಯರ್ಮೇನ್ ಶಕೀಲ್ ಅಹ್ಮದ್, ತಿಂಗಳಾಡಿ ಕ್ಲಸ್ಟರ್ ಅದ್ಯಕ್ಷ ಅಶ್ರಫ್ ಮಾಡಾವು, ತಿಂಗಳಾಡಿ ಎಜುಕೇಶನ್ ಸೆಂಟರ್ ಉಪಾಧ್ಯಕ್ಷ ಮಹಮ್ಮದ್ ಕುಂಞಿ, ಕುಂಬ್ರ ರೇಂಜ್ ಮ್ಯಾನೇಜ್ ಮೆಂಟ್ ಅಧ್ಯಕ್ಷ ಮಜೀದ್ ಬಾಳಾಯ, ಶಂಸುಲ್ ಉಲಮಾ ಎಜುಕೇಶನ್ ಸೆಂಟರ್ ಕೋಶಾಧಿಕಾರಿ ಅಬ್ದುಲ್ ಹಮೀದ್ ದರ್ಬೆ, ತಿಂಗಳಾಡಿ ಯುನಿಟ್ ಅಧ್ಯಕ್ಷ ಸಮದ್, ವಲಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಸಲಾಂ ಹಾಜಿ ಮೇನಾಲ, ಬಶೀರ್ ಕೌಡಿಚ್ಚಾರು, ಹನೀಫ್ ಪೋಸೋಟಿಮಾರ್, ಶಿಹಾಬ್ ಪಳ್ಳತ್ತೂರು, ಹಾರಿಸ್ ತ್ಯಾಗರಾಜೆ, ಹಾರಿಸ್ ಬೋಳೋಡಿ, ಸಯೀದ್ ತೋಟ, ಪವಾಝ್ ಪಾಲ್ತಾಡು, ನೌಷಾದ್ ಕಳಂಜ, ಅಬ್ದುಲ್ ರಝಾಕ್ ದರ್ಬೆ, ಸುಫಿಯಾನ್ ತಿಂಗಳಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸುಮಾರು 32 ಮಂದಿ ರಕ್ತಾದಾನ ಮಾಡಿದರು. ಸಿದ್ದೀಕ್ ಸುಲ್ತಾನ್ ಅವರು 38ನೇ ಬಾರಿ ರಕ್ತದಾನ ಮಾಡಿ ಮಾದರಿಯಾದರು.