
ಪುತ್ತೂರು: ಬೆಳಿಯೂರುಕಟ್ಟೆ ಮಂಜ ಮಖಾಂ ಉರೂಸ್ ಸಮಾರಂಭ ಮೇ.24ರಂದು ನಡೆಯಿತು.
ಹಾಫಿಲ್ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಪುಣಚ ಜುಮಾ ಮಸೀದಿಯ ಖತೀಬ್ ಬಿ ಎಂ ಮುಹಮ್ಮದ್ ದಾರಿಮಿ ನೇತೃತ್ವದಲ್ಲಿ ಕೂಟ್ ಝಿಯಾರತ್ ನಡೆಯಿತು.
ಮಹ್ಮೂದುಲ್ ಫೈಝಿ ಓಲೆಮೊಂಡೋವು ನೇತೃತ್ವದಲ್ಲಿ ಸ್ವಲಾತ್ ಹಾಗೂ ಹಲ್ಕಾ ಝಿಕ್ರ್ ಮಜ್ಲಿಸ್ ನಡೆಯಿತು.
ಪರಿಯಲ್ತಡ್ಕ ಜುಮಾ ಮಸೀದಿ ಖತೀಬ್ ಹಸೈನಾರ್ ಫೈಝಿ ನಸೀಹತ್ ನೀಡಿದರು. ಉರೂಸ್ ಸಮಾರಂಭದಲ್ಲಿ ಕರ್ನಾಟಕ ಉಲಮಾ ಕೋರ್ಡಿನೇಷನ್ ಅಧ್ಯಕ್ಷ ಅಸ್ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾ ನೆರವೇರಿಸಿ ಉದ್ಘಾಟಿಸಿದರು. ಡಾ. ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಕನ್ನಡ ಪ್ರಭಾಷಣ ನಡೆಸಿದರು.
ಮುಖ್ಯ ಪ್ರಭಾಷಣ ನಡೆಸಿದ ನೌಫಲ್ ಸಖಾಫಿ ಕಳಸ ಮಾತನಾಡಿ ಪ್ರತಿ ಕ್ಷಣವೂ ನಮ್ಮ ಆಯಸ್ಸು ಮುಗಿದು ಹೋಗುತ್ತಿದ್ದು ಮರಣದತ್ತ ಹತ್ತಿರವಾಗುತ್ತಿದ್ದೇವೆ, ಅಲ್ಲಾಹು ನೀಡಿರುವ ಅನುಗ್ರಹದಲ್ಲಿ ಇದ್ದುರಲ್ಲಿ ತೃಪ್ತಿ ಪಟ್ಟು ಜೀವನ ನಡೆಸಬೇಕು, ಆಡಂಬರದ ಜೀವನಕ್ಕೆ ಮಾರುಹೋಗದೇ ಅಲ್ಲಾಹು ಇಷ್ಟಪಡುವ ರೀತಿಯಲ್ಲಿ ಜೀವನ ಸಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಹಫೀಝ್ ಶರೀಫ್ ಸಖಾಫಿ ಅಲ್ ಹಿಕಾಮಿ ಉಕ್ಕುಡ, ಎಸ್ ಪಿ ಹಂಝ ಸಖಾಫಿ ಮಿತ್ತೂರ್, ಅಬೂಶಝ ಅಬ್ದುರಝಾಕ್ ಖಾಸಿಮಿ ಮೈದಾನಿಮೂಲೆ, ಅಶ್ರಫ್ ಸಖಾಫಿ ಅಡೂರ್, ನಝೀರ್ ಸಖಾಫಿ ಪರಿಯಾಲ್ತಡ್ಕ, ಹಾಫಿಝ್ ಉಮರುಲ್ ಫಾರೂಕ್ ಸಖಾಫಿ ಸಾಜ, ಆಸಿಫ್ ಸಖಾಫಿ ರೆಂಜ, ಅಬ್ದುನ್ನಾಸಿರ್ ರಝ್ವಿ ಸಾರ್ಯ, ಸಿದ್ದಿಕ್ ಫೈಝಿ ಮುಕ್ರಂಪಾಡಿ, ಆಶಿಖ್ ಹಿಕಮಿ ಮಾಣ, ಶಫೀಖ್ ಹಿಕಮಿ ಬಡಕಬೈಲ್, ಉಬೈದುಲ್ಲಾ ಸಖಾಫಿ ಕೈಕಂಬ, ಇಬ್ರಾಹಿಂ ಖಲೀಲ್ ಮಾಲಿಕಿ, ಸಿರಾಜುದ್ದೀನ್ ಹನೀಫಿ ಎಕ್ರೆಜಾಲ್, ಹನೀಫ್ ಸಹದಿ ಸಾಜ, ಹೈದರ್ ಹಾಶಿಮಿ ಸಾರ್ಯ, ಇಬ್ರಾಹಿಂ ಕೌಸರಿ ಪುಣಚ, ಸುಲೈಮಾನ್ ಮುಸ್ಲಿಯಾರ್ ಪುಣಚ, ಎಂ.ಎಸ್ ಮುಹಮ್ಮದ್, ಯೂಸುಫ್ ಹಾಜಿ ಕೈಕಾರ, ಎಂ.ಎಸ್ ಅಬ್ದುಲ್ಲಾ, ಶಾಕಿರ್ ಹಾಜಿ ಮಿತ್ತೂರ್, ಕಲಂದರ್ ಕಬಕ, ಕರೀಂ ಸಂಕೇಶ್, ಮಹಮೂದ್ ಹಾಜಿ ಸಿಟಿ ಬಜಾರ್, ಯು.ಟಿ ಅಲಿ, ಇಸ್ಮಾಯಿಲ್ ನಾಟೆಕ್ಕಲ್, ಶಫೀಕ್ ಎಂ ಎಸ್, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ಖಾದರ್ ಮೇರ್ಲ, ಫಾರೂಖ್ ಇಂಜಿನಿಯರ್, ಅನಸ್ ಪೈಸಾರಿ ಉಪಸ್ಥಿತರಿದ್ದರು.
ಕೈಕಂಬ ಮರ್ಕಝ್ ಅಧ್ಯಕ್ಷ ಬದ್ರುದ್ದೀನ್ ಅಝ್ಹರಿ ಸ್ವಾಗತಿಸಿದರು. ಮಂಜ ಜುಮಾ ಮಸೀದಿ ಖತೀಬ್ ರವೂಫ್ ಹಾಶಿಮಿ ವಂದಿಸಿದರು.
ಬೆಳಿಯೂರುಕಟ್ಟೆ ಮಂಜ ಮಖಾಂ ಉರೂಸ್ ಮಳೆಯ ನಡುವೆಯೂ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನೂರಾರು ಮಂದಿಗೆ ಅನ್ನದಾನ ನಡೆದಿದೆ. ಉರೂಸ್ ಕಾರ್ಯಕ್ರಮದ ಯಶಸ್ಸಿನಲ್ಲಿ ಕೈಜೋಡಿಸಿದ ಪ್ರತಿರ್ಯೋರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
-ಯೂಸುಫ್ ಗೌಸಿಯಾ ಸಾಜ,
ಅಧ್ಯಕ್ಷರು ಅನ್ಸಾರಿಯಾ ಜುಮಾ ಮಸ್ಜಿದ್ ಮಂಜ