ಮೈಂದನಡ್ಕ : ಭಾರಿ ಗಾಳಿ ಮಳೆಗೆ ಬಿದ್ದ ಮನೆ ಚಾವಣಿ

0

ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಮಹಮ್ಮದ್ ಸವಾದ್ ಎಂಬವರಿಗೆ ಸೇರಿದ ಮನೆಯ ಚಾವಣಿ, ಶೌಚಾಲಯ ಸಂಪೂರ್ಣ ವಾಗಿ ಬಿದ್ದಿದ್ದು, ಅಡುಗೆ ಕೋಣೆಯಲ್ಲಿ ಕೆಲಸ ಮಾಡುತಿದ್ದ ರಹಿಯಾನ ಎಂಬರಿಗೆ ತಲೆ ಮತ್ತು ಸೊಂಟಕ್ಕೆ ಸಣ್ಣ ಪುಟ್ಟ ಗಾಯಗಳಾಗಿದೆ.


ಹಾಗೂ ಚಾವಣಿ ಒಳಗಿದ್ದ ಗ್ರೈಂಡರ್, ವಾಷಿಂಗ್ ಮೆಷಿನ್,ಮಿಕ್ಸಿ,ಸೇರಿದಂತೆ ಹಲವು ಇಲೆಕ್ಟ್ರಾನಿಕ್ ಸಾಧನಗಳಿಗೆ ಹಾನಿಯಾಗಿದೆ. ಮನೆಯಲ್ಲಿ ರಹಿಯಾನ ಮತ್ತು ಮಕ್ಕಳು ಮಾತ್ರ ಇದ್ದು, ರಹಿಯಾನ ತಾಯಿ ಮತ್ತು ತಂದೆ ಸುಲೈಮಾನ್ ಅವರು ಅಜ್ಜಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರನ್ನು ನೋಡಿ ಬರಲು ತೆರಳಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.

ಬಡಗನ್ನೂರು ಗ್ರಾಮ ಪಂಚಾಯತ್ ಪಿಡಿಒ ಬಿ ಸಿ ಸುಬ್ಬಯ್ಯ ವಾರ್ಡ್ ಸದಸ್ಯೆ ಸುಜಾತ ಎಂ ಮತ್ತು ವಾರ್ಡ್ ಸದಸ್ಯ ಧರ್ಮೇoದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here