ನೆಲ್ಯಾಡಿ : ಜೆಸಿಐ ನೆಲ್ಯಾಡಿ ವತಿಯಿಂದ ಮೇ ತಿಂಗಳ ಗೌರವ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಇಚಿಲಂಪಾಡಿ ನಿವಾಸಿ ದಿ. ಕಿಟ್ಟಣ್ಣ ಪೂಜಾರಿ ಹಾಗೂ ವೇದಾವತಿ ದಂಪತಿ ಪುತ್ರ ಹವಾಲ್ದಾರ್ ಹರಿಶ್ಚಂದ್ರ ಇವರಿಗೆ ನೀಡಿ ಗೌರವಿಸಲಾಯಿತು.
ಇವರು ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ವಿವಿಧ ಕಡೆ ಸೇವೆಯನ್ನು ಸಲ್ಲಿಸಿ ಇದೀಗ ನಿವೃತಾರಾಗಿರುತ್ತಾರೆ. ದೇಶಕ್ಕೋಸ್ಕರ ತನ್ನ ಪ್ರಾಣದ ಹಂಗು ತೊರೆದು ಹಗಲಿರುಳು ಗಡಿ ಕಾಯುವ ಯೋಧರನ್ನು ಗೌರವಿಸಲು ಜೆಸಿಐ ನೆಲ್ಯಾಡಿ ಸಂಸ್ಥೆಯು ಬಹಳ ಹೆಮ್ಮೆ ಪಡುತ್ತದೆ.ಇತ್ತೀಚೆಗಷ್ಟೇ ಭಾರತ ಪಾಕ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ದೇಶ ರಕ್ಷಣೆಯಲ್ಲಿ ತೊಡಗಿದ ನಮ್ಮ ಸೈನಿಕರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲಾಯಿತು.
ಜೆಸಿಐ ನೆಲ್ಯಾಡಿ ಯ ಅಧ್ಯಕ್ಷ ಜೆಸಿ ಡಾ ಸುಧಾಕರ್ ಶೆಟ್ಟಿ. ಪೂರ್ವವಲಯ ಉಪಾಧ್ಯಕ್ಷರಾದ ಜೆಸಿ ಪ್ರಕಾಶ್ ಕೆ ವೈ.ಮಹಿಳಾ ಜೆಸಿ ಅಧ್ಯಕ್ಷೆ ಜೆಸಿ ಪ್ರವೀಣಿ ಸುಧಾಕರ್ ಶೆಟ್ಟಿ, ಕಾರ್ಯ ದರ್ಶಿ ನವ್ಯಾಪ್ರಸಾದ್, ಜೆಸಿ ಪುರಂದರ ಗೌಡ, ಜೆಸಿ ದಯಾನಂದ ಕೆ ಆದರ್ಶ ಜೆಸಿ ಜಾಹ್ನವಿ ಜೆಸಿ ಲೀಲಾ ಮೋಹನ್ ಜೆಸಿ ಶ್ರೇಯಸ್ ಶೆಟ್ಟಿ ಜೆಸಿ ಹರೀಶ್ ರೈ ಜೆಸಿ ಸುಪ್ರಿತಾ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು