
ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಛಾಯಾಬಿಂಬ ಪ್ರತಿಷ್ಠಾ ಮಹೋತ್ಸವವು ಮೇ.28 ರಿಂದ ಆರಂಭಗೊಂಡು ಮೇ.30ರವರೆಗೆ ನಡೆಯಲಿದ್ದು, ಇದರ ಕಾರ್ಯಾಲಯದ ಉದ್ಘಾಟನೆ ಮೇ.28ರಂದು ಬೆಳಿಗ್ಗೆ ನಡೆಯಿತು.
ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಇಒ ಸತ್ಯನಾರಾಯಣ ಅಡಿಗ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ವೇಳೆ ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಶ್ರಿಕುಮಾರ್ ಭಟ್ ಅಡ್ಯೆತ್ತಿಮಾರು, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಕಾರ್ಯದರ್ಶಿ ಸುರೇಂದ್ರ ಕಕ್ಕೂರು, ಆರ್ಥಿಕ ಸಮಿತಿ ಸಹಸಂಚಾಲಕ ಅಜಿತ್ ರೈ ನುಳಿಯಾಲು, ಗೌರವ ಸಲಹೆಗಾರ ಸಾಂತಪ್ಪ ಗೌಡ ಪಂಬೆಜಾಲು, ಕಾರ್ಯಾಲಯ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಕಕ್ಕೂರು ಮತ್ತಿತರರು ಉಪಸ್ಥಿತರಿದ್ದರು.