ಪುತ್ತೂರು: ಬ್ರೇಕ್ ಪೈಲ್ ಆಗಿ ಗ್ಯಾರೇಜ್ ಹೊರಾಂಗಣದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಟ್ಟೆತ್ತಡ್ಕ ನಿವಾಸಿ ಮಹಮ್ಮದ್ ರಿಯಾಜ್ ಅವರು ದೂರುದಾರರಾಗಿದ್ದು, ಅವರ ತಂದೆಯ ಮಾಲಕತ್ವದಲ್ಲಿರುವ ಬಜಾಜ್ ಎಲ್ಪಿಜಿ 4ಎಸ್ ಆಟೋ ರಿಕ್ಷಾ (ಕೆ.ಎ703521) ಕಳವಾಗಿದೆ.
ಮಹಮ್ಮದ್ ರಿಯಾಜ್ ಅವರು ಮೇ.23ರಂದು ರಾತ್ರಿ ಮುರ ಕಡೆ ಬಾಡಿಗೆ ಬಂದು ಹಿಂದಿರುಗುವ ಸಂದರ್ಭ ರಿಕ್ಷಾ ಬ್ರೇಕ್ ಪೈಲ್ ಆಗಿದ್ದರಿಂದ ತಂದೆಗೆ ಮಾಹಿತಿ ನೀಡಿ ಅವರು ಹೇಳಿದಂತೆ ಪರಿಚಯಸ್ಥ ಕಬಕ ಗ್ರಾಮದ ಮುರ ಎಂಬಲ್ಲಿರುವ ರಂಜಿತ್ ಎಂಬವರ ಆದಿಶಕ್ತಿ ಆಟೋವರ್ಕ್ಸ್ ಗ್ಯಾರೇಂಜ್ನ ಹೊರಾಂಗಣದಲ್ಲಿ ನಿಲ್ಲಿಸಿ ಬಂದಿದ್ದರು.
ಮೇ.24ರಂದು ಮಹಮ್ಮದ್ ರಿಯಾಜ್ ಅವರ ತಂದೆ ಗ್ಯಾರೇಜ್ ಮಾಲಕರಿಗೆ ಕರೆ ಮಾಡಿ ವಿಚಾರಿಸಿದಾಗ ರಿಕ್ಷಾ ಇಲ್ಲದಿರುವ ಕುರಿತು ತಿಳಿಸಿದ್ದರು. ಈ ನಿಟ್ಟಿನಲ್ಲಿ ಮಹಮ್ಮದ್ ರಿಯಾಜ್ ಅವರು ಸ್ಥಳಕ್ಕೆ ಬಂದು ನೋಡಿದಾಗ ರಿಕ್ಷಾವನ್ನು ಕಳವು ಮಾಡಿರುವುದು ಬೆಳಕಿಗ ಬಂದಿದೆ. ಎಲ್ಲಾ ಕಡೆ ಹುಡುಕಾಡಿದ ಬಳಿಕ ರಿಕ್ಷಾ ಪತ್ತೆಯಾಗದ ಹಿನ್ನೆಲೆಯಲ್ಲಿ ಮೇ.26ರಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.