ಪುತ್ತೂರು: ಪುತ್ತೂರು ಕಲ್ಲಾರೆಯಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಉಪ್ಪಿನಂಗಡಿ ಶಾಖೆಯು ಮೇ.29ರಂದು ಉಪ್ಪಿನಂಗಡಿ ಆದಿತ್ಯ ಹೊಟೇಲ್‌ನ ಬಳಿಯ ಲಕ್ಷ್ಮೀ ಟವರ‍್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.
ಕಳೆದ ೨೪ ವರ್ಷಗಳಿಂದ ಮಕ್ಕಳಿಗೆ ನಾನಾ ರೀತಿಯ ಕಲೆಗಳ ಬಗ್ಗೆ ತರಬೇತಿ ನೀಡುತ್ತಾ ಬಂದಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ನೀಡಿದೆ. ಇದೀಗ ಪೋಷಕರ ವಿನಂತಿಯಂತೆ ಉಪ್ಪಿನಂಗಡಿಯಲ್ಲಿ ಶಾಖೆ ಆರಂಭಗೊಳ್ಳಲಿದೆ. ಚಿತ್ರಕಲೆ, ಹಾಗು ಚಿತ್ರ ಕಲೆಯ ಎಲ್ಲಾ ತರಹದ ಆಯಾಮಗಳು, ಸುಗಮ ಸಂಗೀತ, ಚಲನಚಿತ್ರ ಗೀತೆ, ಕರೋಕೆಯೊಂದಿಗೆ ಹಾಡುವ ತರಬೇತಿ, ಭರತನಾಟ್ಯ, ಜಾನಪದ ಗೀತೆಗಳು, ರಂಗ ಸಂಗೀತ, ಕೀಬೋರ್ಡ್ ತರಬೇತಿ, ರಂಗ ಶಿಕ್ಷಣ ಸಹಿತ ಹಲವಾರು ತರಬೇತಿಗಳನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ.