ನವೋದಯ, ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾಮಾತಾ ಅಕಾಡೆಮಿಗೆ ಉತ್ತಮ ಫಲಿತಾಂಶ

0

ಪುತ್ತೂರು: ದಕ್ಷಿಣ ಕನ್ನಡದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಗೆ ಜವಾಹರ್ ನವೋದಯ ವಸತಿ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.

ಎರಡು ವಸತಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಪಡೆದ ಇಬ್ಬರು ವಿದ್ಯಾರ್ಥಿಗಳು:
ಒಂದೇ ಸೂರಿನಡಿ ವಿವಿಧ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ನೇಸರ ಬಿ ಕೆ ಮತ್ತು ತನುಷ್‌ರಾಜ್ ತೇಜಸ್ವಿ ರವರು ಜವಾಹರ್ ನವೋದಯ ಹಾಗೂ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾಗಿ ಸದ್ರಿ ಶಾಲೆಗಳ ಪ್ರವೇಶಾತಿ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪಂಚಮ ದೇವರಕಾನ ನಿವಾಸಿ ಭರತ್ ಕುಮಾರ್ ಮತ್ತು ಕವಿತಾ ದಂಪತಿ ಪುತ್ರ ನೇಸರ ಬಿ ಕೆ. ಹಾಗೂ ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ದೊಡ್ಡಡ್ಕ ನಿವಾಸಿ ದೀನ್‌ರಾಜ್ ಡಿ ಸಿ ಮತ್ತು ಸುಷ್ಮಾ ದಂಪತಿ ಪುತ್ರ ದೈವಿಕ್ ಚಂದ್ ಡಿ. ಡಿ., ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೇವರಗುಡ್ಡೆ ನಿವಾಸಿ ಡಿ.ಜಿ ರವಿರಾಜ್ ಹಾಗೂ ರಶ್ಮಿ ಕೆ ದಂಪತಿಯ ಪುತ್ರ ತನುಷ್‌ ರಾಜ್ ತೇಜಸ್ವಿ, ಕೊಡಿಪ್ಪಾಡಿಯ ಪಂಬತ್ತಮಜಲು ‘ಶ್ರೀ ನಿಲಯ’ ನಿವಾಸಿ ಎಸ್. ಷಣ್ಮುಗನ್ ಮತ್ತು ಎಸ್ ಗಾಯತ್ರಿ ದಂಪತಿ ಪುತ್ರ ಹನಿಶ್ ಎಸ್.ರವರು ವಿದ್ಯಾಮಾತಾದಲ್ಲಿ ತರಬೇತಿ ಪಡೆದು ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಈ ರೀತಿಯ ಯಶಸ್ಸಿನ ಸಾಧನೆ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯ ತರಬೇತಿಗೆ ಹಿಡಿದ ಕೈಗನ್ನಡಿಯಾಗಿದ್ದು ಇನ್ನೂ ಹಲವಾರು ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲು ಸೂರ್ತಿಯಾಗಿದೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಧನೆಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ಮಂಡಳಿ , ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here