ಪುತ್ತೂರು: ಪುತ್ತೂರಿನ ವಿದ್ಯಾ ಪಲ್ಲವಿ ಸಂಗೀತ ವಿದ್ಯಾಲಯ ಮತ್ತು ಲಯನ್ಸ್ ಕ್ಲಬ್, ಪುತ್ತೂರು ಇದರ ಸಹಯೋಗದೊಂದಿಗೆ ಸಂಗೀತ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ-ಕೀಬೋರ್ಡ್ ರಸಸಂಜೆ ಕಾರ್ಯಕ್ರಮ ಮೇ.25ರಂದು ನಡೆಯಿತು.
ಮಾ. ಸನ್ಮಯ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಖ್ಯಾತ ಅಂತರ್ಜಲ ತಜ್ಞ, ಸಾಹಿತಿ, ಕೃಷಿಕರಾದ ಮಧುರಕಾನನ ಗಣಪತಿ ಭಟ್ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಗೀತ ಶಾಲೆಯ ನಿರ್ದೇಶಕ ನಟರಾಜ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ರಂಗನಾಥ ರಾವ್, ನಿವೃತ್ತ ಎಂಜಿನಿಯರ್ ಬಿಎಸ್ಎನ್ಎಲ್ ಪುತ್ತೂರು ಮತ್ತು ವಸುಂಧರಾ ರಾಜ್ಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಕಾರ್ಯಕ್ರಮ ನಡೆಯಿತು. ಶಶಿಕಲಾ ಟೀಚರ್, ವಿಟ್ಲ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಕೇಳುಗರ ಮೆಚ್ಚುಗೆ ಪಡೆಯಿತು.