ರೂ.42 ಲಕ್ಷ ವೆಚ್ಚದಲ್ಲಿ ನಿರ್ಮಾಣ. ಉಪಹಾರ ಭವನ, ಪಾಕಶಾಲೆ, ಕಛೇರಿ ಇತ್ಯಾದಿ
ಪುತ್ತೂರು: ಭಗವಾನ್ ಶ್ರೀರಾಮಚಂದ್ರ ದೇವರು ಸಪರಿವಾರವಾಗಿ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕ ಕ್ಷೇತ್ರವಾಗಿರುವ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಶ್ರೀಕ್ಷೇತ್ರದಲ್ಲಿರುವ ಶ್ರೀರಾಮ ಮಂದಿರದ ವಠಾರದಲ್ಲಿ ಸುಮಾರು 42 ಲಕ್ಷ ರೂ.ವೆಚ್ಚದಲ್ಲಿ ನೂತನಾಗಿ ನಿರ್ಮಾಣವಾಗಲಿರುವ ಭೋಜನಾಲಯಕ್ಕೆ ಭೂಮಿಪೂಜೆ ಮತ್ತು ಶಿಲ್ಯಾನ್ಯಾಸ ಕಾರ್ಯಕ್ರಮ ಮೇ.28 ರಂದು ಬೆಳಿಗ್ಗೆ ನಡೆಯಿತು.

ವೇದಮೂರ್ತಿ ಕೃಷ್ಣ ಕುಮಾರ ಉಪಾಧ್ಯಾಯ ಪಟ್ಲಮೂಲೆ ಇವರ ನೇತೃತ್ವದಲ್ಲಿ ಅರ್ಚಕ ರವಿರಾಮ ಭಟ್ ಸನ್ಯಾಸಿಗುಡ್ಡೆ ಇವರು ಆರಂಭದಲ್ಲಿ ಶ್ರೀರಾಮಚಂದ್ರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಬಳಿಕ ಭೂಮಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಧ್ವಾರಕ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ರವರು ಭೂಮಿ ಪೂಜೆ ನೆರವೇರಿಸಿದರು.
ಈ ಕೆಲಸ ಕಾರ್ಯಗಳಿಗೆ ವಾಸ್ತು ತಜ್ಞರಾಗಿರುವ ಪಿ.ಜಿ ಜಗನ್ನೀವಾಸ ರಾವ್, ಧಾರ್ಮಿಕ ಪರಿಷತ್ತುನ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಪದ್ಮಾವತಿ ಶೀನಪ್ಪ ರೈ ಕೊಡಂಕೀರಿ, ಕೆಯ್ಯೂರು ಶ್ರೀ ಮಹಿಮಷರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಶ್ರೀರಾಮ ಮಂದಿರದ ಮಾಜಿ ಅಧ್ಯಕ್ಷ ಕರುಣಾಕರ ರೈ ಅತ್ರೆಜಾಲು, ನಿಕಟಪೂರ್ವ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರು, ಕೆದಂಬಾಡಿಬೀಡು ಚಂದ್ರಹಾಸ ಬಲ್ಲಾಳ್, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ರಘುನಾಥ ರೈ ಪಂಜಿಗುಡ್ಡೆ, ಸಂಜೀವ ರೈ ಕುರಿಕ್ಕಾರ, ರಾಮಕೃಷ್ಣ ರೈ ಕುಕ್ಕುಂಜೋಡು, ಬಾಲಕೃಷ್ಣ ರೈ ಮಾಡಾವು, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ಮುಂಡಾಳಗುತ್ತು ರಾಮಕೃಷ್ಣ ಆಳ್ವ, ಕುಂಬ್ರ ಮೂಕಾಂಬಿಕ ಪ್ರಿಂಟರ್ಸ್ ಮಾಲಕ ದಿವಾಕರ ಶೆಟ್ಟಿ ಮೇಸ್ತ್ರಿಗಳಾದ ಬಾಲಕೃಷ್ಣ ಪಲ್ಲತ್ತಡ್ಕ, ಬಾಲಕೃಷ್ಣ ನಾಯ್ಕ ಕೋಡಿಯಡ್ಕ ಹಾಗೂ ತಂಡದವರು ಹಾಗೇ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು, ಭಜನಾ ಸೇವಾರ್ಥಿಗಳು, ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಕಾರ್ಯದರ್ಶಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವ, ಭಜನಾ ಸಮಿತಿ ಅಧ್ಯಕ್ಷ ವಿನೋದ್ ಪೂಜಾರಿ ಕೋಡಿಯಡ್ಕ, ಕಾರ್ಯದರ್ಶಿ ನಿತೀಶ್ ರೈ ಕೋರಂಗರವರುಗಳು ಅತಿಥಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.
ರೂ.42ಲಕ್ಷ ವೆಚ್ಚದ ಭೋಜನಾಲಯ- ಭೋಜನಾಲಯ ನಿರ್ಮಾಣಕ್ಕೆ ದಾನಿಗಳ ಸಹಕಾರ
ಶ್ರೀರಾಮ ಮಂದಿರದ ಹಿಂಭಾಗದಲ್ಲಿ ನಿರ್ಮಾಣವಾಗಲಿರುವ ಈ ಭೋಜನಾಲಯವು ಸುಮಾರು 42 ಲಕ್ಷ ರೂಪಾಯಿ ವೆಚ್ಚದ್ದು ಆಗಿದ್ದು ಇದರಲ್ಲಿ ಮುಖ್ಯವಾಗಿ ಪಾಕಶಾಲೆ, ಉಪಹಾರ ಭವನ, ದಿನಸಿ ಮತ್ತು ಪಾತ್ರೆ ಇತರ ಸಾಮಾಗ್ರಿ ಸಂಗ್ರಹ ಕೊಠಡಿ, ಕಛೇರಿ ಹಾಗೂ ಶೌಚಾಲಯವನ್ನು ಒಳಗೊಂಡಿದೆ. ಈ ಭೋಜನಾಲಯವು ಸಂಪೂರ್ಣವಾಗಿ ಊರ ಪರವೂರ ದಾನಿಗಳ, ಭಕ್ತಾಧಿಗಳ ಸಹಕಾರದಿಂದ ನಿರ್ಮಾಣವಾಗಲಿದೆ. ಈಗಾಗಲೇ ಹಲವು ಮಂದಿ ದಾನಿಗಳು ಆರ್ಥಿಕ ಸಹಕಾರವನ್ನು ನೀಡಿದ್ದಾರೆ. ಪ್ರಪ್ರಥಮವಾಗಿ ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ನ ಮಾಲಕ ಮೋಹನದಾಸ ರೈ ಕುಂಬ್ರರವರು 1.25ಲಕ್ಷ ರೂಪಾಯಿಗಳನ್ನು ನೀಡುವುದಾಗಿ ವಾಗ್ದಾನ ಮಾಡುವ ಮೂಲಕ ರೂ.25,100 ದೇಣಿಗೆಯನ್ನು ಈಗಾಗಲೇ ಸಮಿತಿಗೆ ಹಸ್ತಾಂತರಿಸಿದ್ದಾರೆ.
ಧ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ರವರು ಶ್ರೀರಾಮ ಮಂದಿರದ ನೂತನ ಕಛೇರಿಯನ್ನು ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದು ಆರಂಭಿಕ ದೇಣಿಗೆ ರೂ.50 ಸಾವಿರನ್ನು ಸಮಿತಿಗೆ ಹಸ್ತಾಂತರಿಸಿದ್ದಾರೆ. ಬೂಡಿಯಾರ್ ಗಂಗಾಧರ ರೈ ಸ್ಮರಣಾರ್ಥ ಅವರ ಪತ್ನಿ ಉಷಾ ಗಂಗಾಧರ ರೈ ಕೆರೆಮೂಲೆ ಮತ್ತು ಮಕ್ಕಳು , ಹೇಮಳ ಗಂಗಾಧರ ಗೌಡ ಇದ್ಯಪೆ, ಮುಂಡಾಳಗುತ್ತು ಸೌಮ್ಯ ಸುರೇಶ್ ರೈ ಮಾಣಿಪ್ಪಾಡಿ ಇವರುಗಳು ರೂ.1.25 ಲಕ್ಷ ವಾಗ್ದಾನ ಮಾಡಿದ್ದು ಈಗಾಗಲೇ ತಲಾ 25 ಸಾವಿರ ರೂಪಾಯಿಗಳ ದೇಣಿಗೆ ನೀಡಿರುತ್ತಾರೆ. ರೇಖಾ ರಾಘವ ಗೌಡ ಕೆರೆಮೂಲೆಯವರು ರೂ.1.25 ಲಕ್ಷ ವಾಗ್ದಾನ ಮಾಡಿದ್ದು ಈಗಾಗಲೇ ರೂ.75 ಸಾವಿರ ದೇಣಿಗೆಯನ್ನು ಸಮಿತಿಗೆ ಹಸ್ತಾಂತರಿಸಿದ್ದಾರೆ. ಮುಂಡಾಳಗುತ್ತು ಸುಗುಣ ಕೋಚಣ್ಣ ರೈ ಸ್ಮರಣಾರ್ಥ ಅವರ ಮಕ್ಕಳಾದ ವಿಜಯ ಆರ್.ಅಡ್ಯಂತಾಯ, ಸುಜಯ ವಿ.ರೈ, ಡಾ.ಮಂಜುನಾಥ ರೈ ಇವರುಗಳು ರೂ.1.25 ಲಕ್ಷ ವಾಗ್ದಾನ ಮಾಡಿದ್ದು ಈಗಾಗಲೇ ರೂ.60 ಸಾವಿರವನ್ನು ಸಮಿತಿಗೆ ಹಸ್ತಾಂತರಿಸಿದ್ದಾರೆ. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ರೂ.5 ಸಾವಿರ ದೇಣಿಗೆ ನೀಡಿದ್ದಾರೆ. ಸದ್ಗುರು ಡಾ.ಗೋಪಾಲ ನಾಯರ್ ಅನುಯಾಯಿಗಳ ಸಮಿತಿ ಮುಂಬೈ, ಶ್ರೀರಾಮ ಮಂದಿರದ ಗೌರವ ಸಲಹೆಗಾರ ರಾಜೀವ ರೈ ಕೋರಂಗ, ಮುಂಡಾಳಗುತ್ತು ಈಶ್ವರ ಆಳ್ವ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು, ಮುಂಡಾಳಗುತ್ತು ಸುಬ್ಬಯ್ಯ ರೈ ಮತ್ತು ಬೆದ್ರುಮಾರು ಸರಸ್ವತಿ ರೈ ಸ್ಮರಣಾರ್ಥ ಬೆದ್ರುಮಾರು ಕುಟುಂಬಸ್ಥರು, ಪದ್ಮಾವತಿ ರೈ ಮತ್ತು ಶೀನಪ್ಪ ರೈ ಕೊಡಂಕೀರಿ ಇವರುಗಳು ಉಪಸ್ಥಿತರಿದ್ದು ತಲಾ 1.25 ಲಕ್ಷ ರೂಪಾಯಿಗಳ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿರುತ್ತಾರೆ. ಪಾಕಶಾಲೆಯ ಮೇಲ್ಛಾವಣಿಗೆ ಬೇಕಾದ ಮರಮಟ್ಟುಗಳನ್ನು ಸುಜಾತ ಯಶೋಧರ ಚೌಟ ಪಟ್ಟೆತ್ತಡ್ಕ ಇವರು ಒದಗಿಸುವುದಾಗಿ ವಾಗ್ದಾನ ಮಾಡಿರುತ್ತಾರೆ.
ಶೌಚಾಲಯಕ್ಕೆ ಜಾಗ ದಾನ
ಭೋಜನಾಲಯದ ಒಂದು ಬದಿಯಲ್ಲಿ ನಿರ್ಮಾಣವಾಗಲಿರುವ ಶೌಚಾಲಯಕ್ಕೆ ದಿ.ಕರ್ತ ಮುಗೇರರವರ ಜಾಗದಿಂದ ಅವರ ವಾರೀಸುದಾರರು 2 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದಾರೆ. ಇವರಿಗೆ ಈ ಸಂದರ್ಭದಲ್ಲಿ ಕರ್ತ ಮುಗೇರರವರ ಕುಟುಂಬದವರಾದ ಮಾಂಕು ಮತ್ತು ಗಿರಿಜಾರವರುಗಳನ್ನು ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು.