ಪುತ್ತೂರು: ಕೆದಂಬಾಡಿ ಗ್ರಾಮದ ಮನೆಯೊಂದರಲ್ಲಿ 85 ವರ್ಷ ಪ್ರಾಯದ ಕೃಷ್ಣ ಗೌಡ ಎಂಬವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೃಷ್ಣ ಗೌಡ ಅವರ ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಟ್ಟ ಬಳಿಕ ಕೃಷ್ಣ ಗೌಡ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಇತ್ತೀಚೆಗೆ ಅವರ ಮಗಳು ಮನೆಗೆ ಬಂದಿದ್ದು ಶುಕ್ರವಾರ ಸಂಬಂಧಿಕರ ಮನೆಗೆ ತೆರಳಿದ್ದರು. ಆ ಬಳಿಕ ಜೂ.1ರಂದು ಮನೆಗೆ ಹಿಂದಿರುಗಿದಾಗ ತಂದೆ ಕೃಷ್ಣ ಗೌಡ ಅವರು ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು.
ಕೃಷ್ಣ ಗೌಡ ಅವರ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.