ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ಸಹಸಂಸ್ಥೆ ಕೊಳ್ತಿಗೆ ಪಶು ಚಿಕಿತ್ಸಾಲಯದಲ್ಲಿ ಸುಮಾರು 25 ವರುಷಗಳಿಂದ ಪಶುವೈದ್ಯಕೀಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎನ್.ಜೆ ಕುಮಾರ್ರವರನ್ನು ಪುತ್ತೂರು ಪಶು ಆಸ್ಪತ್ರೆಯ ಕಛೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪಶುಸಖಿಯರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಎನ್.ಜೆ ಕುಮಾರ್ ದಂಪತಿಗೆ ಭಗವದ್ಗಿತೆಯ ಒಂದು ಪ್ರತಿ ನೀಡಿ ಗೌರವಿಸಲಾಯಿತು. ಡಾ. ಧರ್ಮಪಾಲ್ ರವರು ಶಾಲು, ಪೇಟ, ಹಾರ, ಫಲಪುಷ್ಪ, ನೆನಪಿನ ಕಾಣೆಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಎನ್.ಜೆ. ಕುಮಾರ್ ಅನಿಸಿಕೆ ತಿಳಿಸಿದರು.
ಪುತ್ತೂರು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾದಿಕಾರಿ ಡಾ.ಧರ್ಮಪಾಲ್, ಪಾಣಾಜೆ ಚಿಕಿತ್ಸಾಲಯದ ಮುಖ್ಯ ಪಶುವೈದ್ಯಾದಿಕಾರಿ ಡಾ. ಎಂ.ಪಿ ಪ್ರಕಾಶ್, ಉಪ್ಪಿನಂಗಡಿ ಚಿಕಿತ್ಸಾಲಯದ ಮುಖ್ಯ ಪಶುವೈದ್ಯಾದಿಕಾರಿ ಡಾ. ಉಷಾ, ಪುತ್ತೂರು ಜಾನುವಾರು ಅಭಿವೃದ್ದಿ ಅದಿಕಾರಿ ಪುಷ್ಪರಾಜ ಶೆಟ್ಟಿ, ಕೌಡಿಚ್ಚಾರು ಹಿರಿಯ ಪಶುವೈದ್ಯ ಪರೀಕ್ಷಕ ವೀರಪ್ಪ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಡಿ. ದರ್ಜೆ ನೌಕರರು ಹಾಗೂ ಪಶು ಸಖಿಯರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಜಾನುವಾರು ಅಧಿಕಾರಿ ನಾಗಶಯನ ವಂದಿಸಿದರು.