ಎಸ್‌ಎಸ್‌ಎಲ್‌ಸಿ: ಅನುತ್ತೀರ್ಣಗೊಂಡಿದ್ದ ಓರ್ವ ವಿದ್ಯಾರ್ಥಿ ಮರುಮೌಲ್ಯಮಾಪನದಲ್ಲಿ ಉತ್ತೀರ್ಣ : ಶ್ರೀ ರಾಮಕುಂಜೇಶ್ವರ ಆ.ಮಾ.ಪ್ರೌಢಶಾಲೆಗೆ ಶೇ.100 ಫಲಿತಾಂಶ

0

ರಾಮಕುಂಜ: 2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದ ವೇಳೆ ಅನುತ್ತೀರ್ಣಗೊಂಡಿದ್ದ ಓರ್ವ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣರಾಗುವ ಮೂಲಕ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ತೇರ್ಗಡೆ ಫಲಿತಾಂಶ ಲಭಿಸಿದೆ.


ಕಳೆದ ಮೇ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ಫಲಿತಾಂಶ ಪ್ರಕಟಗೊಂಡಿದ್ದ ವೇಳೆ ಓರ್ವ ವಿದ್ಯಾರ್ಥಿ (ಶೋಭಿತ್ ಬಿ.ಎಸ್.) ಸಮಾಜ ವಿಜ್ಞಾನ ವಿಷಯದಲ್ಲಿ 31 ಅಂಕ ಪಡೆದುಕೊಂಡು ಅನುತ್ತೀರ್ಣಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ 99.22 ಶೇ. ಫಲಿತಾಂಶ ಲಭಿಸಿತ್ತು. ಇದೀಗ ಮರು ಮೌಲ್ಯಮಾಪನದಲ್ಲಿ ಶೋಭಿತ್ ಬಿ.ಎಸ್.ಗೆ ಸಮಾಜ ವಿಜ್ಞಾನದಲ್ಲಿ 44 ಅಂಕ ದೊರೆತಿದ್ದು ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

2024-25ನೇ ಸಾಲಿನಲ್ಲಿ ಸಂಸ್ಥೆಯಿಂದ ಒಟ್ಟು 145ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದೀಗ 145 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಲಭಿಸಿದೆ. ಇದರಲ್ಲಿ 47 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 95 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here