ಪುತ್ತೂರು: ಮಕ್ಕಳ ಪ್ರಾಥಮಿಕ ಶಿಕ್ಷಣ ಹಾಗೂ ವೈಯಕ್ತಿಕ ಬೆಳವಣಿಗೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣದೊಂದಿಗೆ ಬೆಳೆಸಲು ನರ್ಸರಿ ಶಿಕ್ಷಣದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನರ್ಸರಿ ಶಿಕ್ಷಕಿಯರಿಗೆ ಅತ್ಯುತ್ತಮ ತರಬೇತಿ ಅತ್ಯಾವಶ್ಯಕವಾಗಿದೆ. ಇತ್ತೀಚಿಗೆ ನರ್ಸರಿ ತರಬೇತಿ ಕೋರ್ಸ್ ಜನಪ್ರಿಯವಾಗಿದ್ದು, ಉದ್ಯೋಗಾವಕಾಶವೂ ಹೆಚ್ಚಾಗಿದೆ. ಇದರಿಂದಾಗಿ ಯುವತಿಯರು ಮೊಂಟೆಸರಿ ತರಬೇತಿ ಪಡೆಯುವಲ್ಲಿ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ.
ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯು ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್ನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡಬಲ್ಲ ಶಿಕ್ಷಕ/ಕಿಯರನ್ನು ರೂಪಿಸುತ್ತಿದೆ.
ನರ್ಸರಿ ತರಬೇತಿ ಕೋರ್ಸ್ ಎಂದರೆ ಮಕ್ಕಳ ಶಿಕ್ಷಣ ಮತ್ತು ನೈತಿಕ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ನೈಪುಣ್ಯತೆ ಮತ್ತು ತಂತ್ರಗಳನ್ನು ಕಲಿಸುವ ಒಂದು ವಿಶಿಷ್ಟ ತರಬೇತಿ ಕ್ರಮವಾಗಿದೆ. ಈ ತರಬೇತಿಯಲ್ಲಿ ಮಕ್ಕಳ ಮನೋವಿಜ್ಞಾನ, ಮಕ್ಕಳ ಭಾಷಾಭಿವೃದ್ಧಿ, ಗಣಿತದ ಪ್ರಾಥಮಿಕ ಅರಿವು, ವಿಜ್ಞಾನ ಮತ್ತು ಪರಿಸರ ಜ್ಞಾನ, ನೈತಿಕ ಶಿಕ್ಷಣ, ಸೃಜನಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳು, ಶಾರೀರಿಕ- ಮಾನಸಿಕ ಬೆಳವಣಿಗೆ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ನೈತಿಕ ಮೌಲ್ಯಗಳ ಬೋಧನೆಗೆ ಹೆಚ್ಚು ಒತ್ತು ನೀಡುಲಾಗುತ್ತದೆ.
ಕೋರ್ಸ್ ಅರ್ಹತೆ:-
ನರ್ಸರಿ ತರಬೇತಿ ಕೋರ್ಸ್ 1 ವರ್ಷದ ಅವಧಿಯದ್ದಾಗಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಅಥವಾ ಪದವೀಧರರು ಈ ತರಬೇತಿಯನ್ನು ಪಡೆಯಬಹುದಾಗಿದೆ. ಪ್ರಗತಿ ಸ್ಟಡೀ ಸೆಂಟರ್ ನಲ್ಲಿ ತರಬೇತಿಯ ಜೊತೆಗೆ ಒಂದು ವರ್ಷದ ಉಚಿತ Diploma in computer skill ಹಾಗೂ Spoken English ತರಬೇತಿಯನ್ನು ಸಹ ನೀಡಲಾಗುತ್ತದೆ. ಈ ತರಬೇತಿಯನ್ನು ಪೂರ್ಣಗೊಳಿಸಿದ ಶಿಕ್ಷಕಿಯರಿಗೆ ಸರ್ಕಾರರಿಂದ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ ಕೋರ್ಸ್ನ ಉದ್ಯೋಗ ಅವಕಾಶಗಳು:
ದೇಶ- ವಿದೇಶಗಳಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ, ಸ್ವತಃ ಪ್ಲೇ- ಸ್ಕೂಲ್ ಅಥವಾ ಡೇ ಕೇರ್ ಕೇಂದ್ರ ಆರಂಭಿಸುವ ಅವಕಾಶ, ಅಥವಾ ನರ್ಸರಿ ತರಬೇತಿ ಕೇಂದ್ರವನ್ನು ತೆರೆಯುವ ಅವಕಾಶವನ್ನು ಈ ಕೋರ್ಸ್ನಿಂದ ಪಡೆಯಬಹುದಾಗಿದೆ.
ಪ್ರಗತಿ ಸ್ಟಡೀ ಸೆಂಟರ್ ನಲ್ಲಿ ನರ್ಸರಿ ಟೀಚರ್ ತರಬೇತಿಯ (NTT) ಪಡೆದ ವಿದ್ಯಾರ್ಥಿಗಳು ರಾಜ್ಯದ ವಿವಿಧ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕಿಯರಾಗಿ ನೇಮಕವಾಗಿರುವುದು ಸಂತಸ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.
ಜು.3ರಿಂದ NTT ತರಗತಿಗಳು ಆರಂಭಗೊಳ್ಳಲಿದ್ದು, ಸೀಮಿತ ಸೀಟ್ಗಳು ಲಭ್ಯವಿರುತ್ತದೆ. ಆಸಕ್ತರಿಗೆ ವಾರದ ಎಲ್ಲಾ ದಿನಗಳಲ್ಲಿ, ಉದ್ಯೋಗಸ್ತರಿಗೆ ಶನಿವಾರ ಅಪರಾಹ್ನ,ಮತ್ತು ಸರಕಾರಿ ರಜಾ ದಿನಗಳಂದು ಹಾಗೂ ದೂರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೊಂದಿಗೆ ತರಬೇತಿ ಲಭ್ಯವಿದೆ. ಸಧ್ಯ 2025-26ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊಂಡಿದ್ದು, ಆಸಕ್ತರು ಪ್ರಗತಿ ಸ್ಟಡಿ ಸೆಂಟರ್ನ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ 9900109490, 9480106274, 8123899490 ನ್ನು ಸಂಪರ್ಕಸಿಬಹುದಾಗಿದೆ. ಸಂಸ್ಥೆಯು ಭಾನುವಾರವೂ ತೆರೆದಿರುತ್ತದೆ ಎಂದು ಸಂಸ್ಥೆಯ ಸಂಚಾಲಕ ಪಿ ವಿ ಗೋಕುಲ್ ನಾಥ್ ತಿಳಿಸಿದ್ದಾರೆ.