43ರ ಸಂಭ್ರಮದಲ್ಲಿ ಫಿಲೋಮಿನಾ ಗಣೇಶೋತ್ಸವ ಜೂ.8ರಂದು ಪೂರ್ವಭಾವಿ ಸಭೆ

0

ಪುತ್ತೂರು:ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಆಡಳಿತಗೊಳಪಟ್ಟು ಸಂತ ಫಿಲೋಮಿನಾ ಕಾಲೇಜು  ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟು ವಿದ್ಯಾರ್ಥಿ ಮಿತ್ರರಿಂದಲೇ ನಡೆಸಲ್ಪಡುವ ದರ್ಬೆ ವಿನಾಯಕ ನಗರದ ಶ್ರೀ ಗಣೇಶೋತ್ಸವಕ್ಕೆ 43ರ ವರ್ಷದ ಸಂಭ್ರಮದ ಹೊಸ್ತಿಲಲ್ಲಿದೆ.

ಪ್ರಸ್ತುತ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಬಗ್ಗೆ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಮಿತ್ರರ ಪೂರ್ವಭಾವಿ‌ ಸಭೆ ಜೂ.8 ರಂದು ಸಂಜೆ ಮುಕ್ರಂಪಾಡಿ ಧರ್ಮಶ್ರೀ ನಗರದ ವಿಘ್ನೇಶ್ ವಠಾರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಯ ಹಿರಿಯ ಹಾಗೂ ವಿದ್ಯಾರ್ಥಿ ಮಿತ್ರರು ಭಾಗವಹಿಸಿ ಸೂಕ್ತ ಸಲಹೆ-ಸೂಚನೆ ನೀಡಿ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿ ಗಣೇಶೋತ್ಸವ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here