ಸಿ.ಆರ್.ಪಿ.ಎಫ್. ಸಬ್ ಇನ್ಸ್‌ಪೆಕ್ಟರ್ ಆಗಿ ಐತ್ತೂರಿನ ಬೆಳಿಯಪ್ಪ ಗೌಡ ಪದೋನ್ನತಿ

0

ಕಡಬ: ಸಿ.ಆರ್.ಪಿ.ಎಫ್. ಸಬ್ ಇನ್ಸ್‌ಪೆಕ್ಟರ್ ಆಗಿ ಐತ್ತೂರಿನ ಬೆಳಿಯಪ್ಪ ಗೌಡ ಪದೋನ್ನತಿ ಹೊಂದಿದ್ದಾರೆ. ಸಿ.ಆರ್.ಪಿ.ಎಫ್. ನಲ್ಲಿ ಸುದೀರ್ಘ 22ವರ್ಷ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹುದ್ದೆಗಳಾದ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಮತ್ತು ಎ.ಎಸ್.ಐ. ಆಗಿ ಸೇವೆ ಸಲ್ಲಿಸಿರುವ ಬೆಳಿಯಪ್ಪ ಗೌಡ ಇವರು ಇಂದು ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ್ದು, ಪ್ರಸ್ತುತ ಇವರು 133ನೇ ಬೆಟಾಲಿಯನ್ ರಾಂಚಿ ಜಾಖಂಡ್‌ನಲ್ಲಿ ಸೇವೆಯಲ್ಲಿರುತ್ತಾರೆ.

ಕಡಬ ತಾಲೂಕು ಐತೂರು ಗ್ರಾಮದ ಮುಂಡಡ್ಕ ಕೃಷ್ಣಮ್ಮ ಮತ್ತು ಬಿರ್ಮಣ್ಣ ಗೌಡ ಇವರ ಪುತ್ರರಾಗಿರುವ ಇವರು ಪತ್ನಿ ವನಿತಾ ಹಾಗೂ ಜಗನ್ ಮತ್ತು ತನ್ವಿನ್ ಎಂಬ ಇಬ್ಬರು ಪುತ್ರರನ್ನು ಹೊಂದಿರುತ್ತಾರೆ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಂಕದಕಟ್ಟೆಯಲ್ಲಿ ಮತ್ತು ಬೈಲು ಬಿಳಿನೆಲೆಯಲ್ಲಿ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆಯಲ್ಲಿ ಮತ್ತು ಜೆಒಸಿ ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ನಂತರ ಕೆ.ಎಸ್.ಎಸ್ ಕಾಲೇಜಿನಲ್ಲಿ ಅಂತಿಮ ಪದವಿ ಪಡೆಯುವಾಗಲೇ 2003ರಲ್ಲಿ ಸಿ.ಆರ್.ಪಿ.ಎಫ್. ನಲ್ಲಿ ಸೇವೆಗೆ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here