ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ವಿಶೇಷ ಸಾಧನೆ

0

ನಿಡ್ಪಳ್ಳಿ: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತು ವೈಜಾನಿಕ ಕ್ಲಿಷ್ಟತೆಯನ್ನು ಪರಿಹರಿಸುವ ದೃಷ್ಟಿಯಿಂದ ಭಾರತದ ಶಿಕ್ಷಣ ಸಚಿವಾಲಯ, ಅಟಲ್ ಟಿಂಕರಿಂಗ್, ಅಟಲ್ ನಾವಿನ್ಯತೆ ಮಿಷನ್ ಮತ್ತು ನೀತಿ ಆಯೋಗ ಹಾಗೂ ಶಿಕ್ಷಣ ಸಚಿವಾಲಯದ ಅನ್ವೇಷಣಾ ಸೆಲ್ ಜಂಟಿಯಾಗಿ ದೇಶದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ನಾವೀನ್ಯತಾ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿತ್ತು. 

ಈ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲಾ ವಿಭಾಗ ಬೆಟ್ಟಂಪಾಡಿ ಇಲ್ಲಿಯ ಎರಡು ತಂಡಗಳು ರಾಷ್ಟ್ರೀಯ ಮಟ್ಟದ ಮೊದಲ ಸಾವಿರ ತಂಡಗಳಲ್ಲಿ ಇವರ ತಂಡ ಆಯ್ಕೆ ಆಗಿರುತ್ತದೆ. ಎರಡು ತಂಡಗಳಲ್ಲಿ ಮೊದಲ ತಂಡವು ಸೆಲೈನ್ ಸೆನ್ಸ್ ವಿಷಯವನ್ನು ಆಧರಿಸಿಕೊಂಡು ತನ್ನ ಪ್ರಾಜೆಕ್ಟ್ ಅನ್ನು ಸಿದ್ಧಪಡಿಸಿತ್ತು. ಈ ತಂಡದ ಸದಸ್ಯರಾಗಿ ವಿದ್ಯಾರ್ಥಿಗಳಾದ ಅಂಕಿತ, ಅನನ್ಯ ಮತ್ತು ಚಾಂದಿನಿ ಭಾಗವಹಿಸಿದ್ದರು. ಇನ್ನೊಂದು ತಂಡ ಕೊಕೊನೆಟ್ ಪೆಡ್ಲೇಟರ್ ನ್ನು ಸಿದ್ಧಪಡಿಸಿ ತನ್ನ ಪ್ರಾಜೆಕ್ಟನ್ನು ಪ್ರಸ್ತುತಪಡಿಸಿತ್ತು. ಈ ತಂಡದ ಸದಸ್ಯರಾಗಿ ವಿದ್ಯಾರ್ಥಿಗಳಾದ ಅನ್ವಿತ್, ಭುವನ್ ಮತ್ತು ಹೇಮಂತ್ ಇವರುಗಳು ಭಾಗವಹಿಸಿದ್ದರು.

ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿ  ಸಿಂಧು ವಿ. ಕೆ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಗುರು ವಿಜಯ ಕುಮಾರ್ ತಿಳಿಸಿದ್ದು ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here