ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಗಾರ

0

ಪುತ್ತೂರು: ಕಸ್ತೂರ್ ಬಾ ಮೆಡಿಕಲ್ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ವಿಭಾಗದ ಸಿಬ್ಬಂದಿಗಳು ಮಂಗಳೂರು ಹಾಗೂ ಪ್ರಗತಿ ಹಾಸ್ಪಿಟಲ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಪುತ್ತೂರು ಇವರ ಸಹಯೋಗದೊಂದಿಗೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.



ಪ್ಯಾರಾಮೆಡಿಕಲ್‌ನ ಸಿಬ್ಬಂದಿ ಬ್ರದರ್ ಕಭಿಲನ್ ಪ್ರಾತ್ಯಕ್ಷಿಕೆಯ ಮೂಲಕ ಹೃದಯಾಘಾತ, ಹುಚ್ಚು ನಾಯಿ ಕಡಿತ, ಹಾವು ಕಡಿತ, ಅಪಸ್ಮಾರ, ಮೂಳೆ ಮುರಿತಕ್ಕೆ ಒಳಗಾದ ವ್ಯಕ್ತಿಗಳ ಜೀವ ಉಳಿಸಲು ಪ್ರಥಮ ಚಿಕಿತ್ಸೆಯನ್ನು ಯಾವ ರೀತಿ ನೀಡಬೇಕು ಎಂದು ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಕಾರ್ಮಿನ್ ಪಾಯಸ್ ಸ್ವಾಗತಿಸಿದರು. ಶಾಲಾ ಮುಖ್ಯಗುರು ವಂ| ಮ್ಯಾಕ್ಸಿಂ ಡಿಸೋಜ ಪ್ರಥಮ ಚಿಕಿತ್ಸೆಯ ಮಹತ್ವದ ಬಗ್ಗೆ ತಿಳಿಸಿದರು. ಶಿಕ್ಷಕ ಕ್ಲೆಮೆಂಟ್ ಪಿಂಟೊ ವಂದಿಸಿದರು.

LEAVE A REPLY

Please enter your comment!
Please enter your name here