ಪುತ್ತೂರು: ಬೊಳುವಾರು ಮಿಶನ್‌ಗುಡ್ಡೆಯಲ್ಲಿ ವಾಸ್ತವ್ಯ ಇಲ್ಲದ ಮನೆಯೊಂದು ಕುಸಿದ ಘಟನೆ ಜೂ.15ರಂದು ನಡೆದಿದೆ. ಘಟನೆಯಿಂದ ಪಕ್ಕದ ಮನೆಗೂ ಹಾನಿಯಾಗಿದೆ.
ಇಬ್ರಾಹಿಂ ಮಿಶನ್‌ಗುಡ್ಡೆಯವರ ಮಾಲಕತ್ವದ ಮನೆಯಲ್ಲಿ ವಾಸ್ತವ್ಯ ಇಲ್ಲ. ಅದಕ್ಕೆ ತಾಗಿಕೊಂಡಿರುವ ಮನೆಯಲ್ಲಿ ವಾಸ್ತವ್ಯ ಇದ್ದಾರೆ. ನಿರಂತರ ಮಳೆಗೆ ಮನೆಯ ಮಾಡು ಪಕ್ಕಾಸು ಸಮೇತ ಕುಸಿದು ಮನೆಗೆ ಹಾನಿಯಾಗಿದೆ. ಮನೆ ಕುಸಿತದಿಂದಾಗಿ ಅದರ ಕಲ್ಲುಗಳು ಪಕ್ಕದ ಮನೆಯ ಮೇಲೆ ಬಿದ್ದಿದೆ. ಹಾಗಾಗಿ ಪಕ್ಕದ ಮನೆಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.