ಸ್ನೇಹತ್ವ, ಸೇವೆಯಿಂದ ಸಮಾಜದಲ್ಲಿ ಬಾಂಧವ್ಯ ವೃದ್ಧಿ-ಡಾ.ಮೆಲ್ವಿನ್ ಡಿ’ಸೋಜ
ಪುತ್ತೂರು: ನಾವು ಸಮಾಜಕ್ಕೆ ಕೊಡುವ ದಾನವು ಅದು ಸಮಾಜದಲ್ಲಿ ವಿನಿಯೋಗವಾದಾಗ ಅದರಷ್ಟು ಸಿಗುವ ಸಂತೋಷ ಬೇರೆ ಸಿಗುವುದಿಲ್ಲ. ಸ್ವೇಹತ್ವ ಮತ್ತು ಸೇವೆ ಕ್ಲಬ್ನ ಉದ್ಧೇಶವಾಗಿದ್ದು ಇದು ಸದಸ್ಯರುಗಳ ನಡುವೆ ಬಾಂಧವ್ಯ ಹೆಚ್ಚುತ್ತದೆ. ಮನುಷ್ಯ ಸಂಘ ಜೀವಿಗಳಾಗಿದ್ದು ಲಯನ್ಸ್ ಕ್ಲಬ್ನಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ಸೇರುವುದು ಕ್ಲಬ್ ಹೆಗ್ಗಳಿಕೆಯಾಗಿದೆ. ಎಲ್ಲರೂ ಜೊತೆಯಲ್ಲಿ ಸೇವೆ ಮಾಡಿದಾಗ ಸಮಾಜದಲ್ಲಿ ಇಂಪ್ಯಾಕ್ಟ್ ಎನಿಸಿಕೊಳ್ಳುತ್ತದೆ ಎಂದು 2023-24ರ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜರವರು ಹೇಳಿದರು.

ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 6, ವಲಯ ಒಂದರ ಲಯನ್ಸ್ ಕ್ಲಬ್ ಮಾಣಿ ಪ್ರಾಯೋಜಕತ್ವದ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕಳೆದ ವರ್ಷ ಆಸ್ತಿತ್ವಕ್ಕೆ ಬಂದಿದ್ದು ಇದೀಗ ಜೂ.14 ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಅವರು ಮಾತನಾಡಿದರು.

ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 6, ವಲಯ ಒಂದರ ಲಯನ್ಸ್ ಕ್ಲಬ್ ಮಾಣಿ ಪ್ರಾಯೋಜಕತ್ವದ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕಳೆದ ವರ್ಷ ಆಸ್ತಿತ್ವಕ್ಕೆ ಬಂದಿದ್ದು ಇದೀಗ ಜೂ.14 ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಅವರು ಮಾತನಾಡಿದರು.

ಕ್ಲಬ್ನ್ನು ಬಲಿಷ್ಟಗೊಳಿಸುವ ಪಣ ತೊಟ್ಟಿರುವುದು ಅಭಿಮಾನದ ಸಂಗತಿ-ಲ್ಯಾನ್ಸಿ ಮಸ್ಕರೇನ್ಹಸ್:
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಹುಟ್ಟಿಗೆ ಕಾರಣಕರ್ತರಾದ ಪ್ರಾಂತ್ಯದ ಮಾಜಿ ಅಧ್ಯಕ್ಷ, ಪ್ರಸ್ತುತ ಪ್ರಾಂತ್ಯದ ಅಂಬಾಸಿಡರ್ ಲ್ಯಾನ್ಸಿ ಮಸ್ಕರೇನ್ಹಸ್ ಮಾತನಾಡಿ, ಈ ನೂತನ ಕ್ಲಬ್ ಕಳೆದ ವರ್ಷ ಜೂನ್ 14 ರಂದು ಆಸ್ತಿತ್ವಕ್ಕೆ ಬಂದಿತ್ತು ಮಾತ್ರವಲ್ಲ ದ್ವಿತೀಯ ವರ್ಷದ ಪದ ಪ್ರದಾನ ಕೂಡ ಅದೇ ವರ್ಷಕ್ಕೆ ಆಗಿರುವುದು ಜೊತೆಗೆ ಮಾಜಿ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜರವರೇ ಪದಪ್ರದಾನವನ್ನು ನೆರವೇರಿಸಿರುವುದು ಕಾಕತಾಳೀಯವಾಗಿದೆ. ಅದೆಷ್ಟೊ ಹೊಸ ಕ್ಲಬ್ಗಳು ಹುಟ್ಟಿಕೊಂಡು ಸದಸ್ಯರ ಸಂಖ್ಯೆಯಲ್ಲಿ ಕುಸಿತ ಕಂಡು ಕ್ಲಬ್ ಮಾಯವಾಗಿದ್ದು ಇದೆ. ಆದರೆ ಈ ಕ್ಲಬ್ ಉತ್ತಮ ಸದಸ್ಯರನ್ನು ಹೊಂದಿದ್ದು ಕ್ಲಬ್ನ್ನು ಬಲಿಷ್ಟಗೊಳಿಸುವ ಪಣ ತೊಟ್ಟಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಉತ್ತಮ ಕಾರ್ಯದೊಂದಿಗೆ ಟಾಪ್ ಹತ್ತರೊಳಗೆ ಬರುವಂತಾಗಬೇಕು-ಪಾವನಾರಾಮ್
ಲಯನ್ಸ್ ರೀಜನ್ ಚೇರ್ಪರ್ಸನ್ ಪಾವನಾರಾಮ ಬಿ. ಮಾತನಾಡಿ, ಜಿಲ್ಲೆಯ 32 ಕ್ಲಬ್ಗಳಲ್ಲಿ ಪುತ್ತೂರು ಕ್ರೌನ್ ಒಂದು ಮಾತ್ರವಲ್ಲ ಸಮಾಜಮುಖಿ ಚಟುವಟಿಕೆಗಳಲ್ಲಿ ಪುತ್ತೂರು ಕ್ರೌನ್ 14ನೇ ಸ್ಥಾನದಲ್ಲಿದೆ. ಕ್ಲಬ್ನ ಎಲ್ಲಾ ವಿಭಾಗಗಳಲ್ಲಿ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ವರ್ಷ ಉತ್ತಮ ಸದಸ್ಯರ ಹೆಚ್ಚಿಸುವಿಕೆಯಿಂದ ಟಾಪ್ ಹತ್ತರೊಳಗೆ ಬರುವಂತಾಗಬೇಕು ಎಂದರು.
ಕ್ಲಬ್ ಸದಸ್ಯರ ಉತ್ಸುಕತೆ ನಾಯಕತ್ವಕ್ಕೆ ರಹದಾರಿ-ಸುದೇಶ್ ಭಂಡಾರಿ
ಲಯನ್ಸ್ ವಲಯಾಧ್ಯಕ್ಷ ಸುದೇಶ್ ಭಂಡಾರಿ ವಿಟ್ಲ ಮಾತನಾಡಿ, ಹೊಸದಾಗಿ ಹುಟ್ಟಿಕೊಂಡ ಕ್ಲಬ್ ಗಳು ಅದರ ಬೆಳವಣಿಗೆಯಲ್ಲಿ ಅಡೆ-ತಡೆ ಅನುಭವಿಸುವುದು ಸಹಜ. ಯಾವುದೇ ಕ್ಲಬ್ ಆಗಲಿ, ಅಭಿವೃದ್ಧಿ ದಿಶೆಯಲ್ಲಿ ಎಡವಟ್ಟು ಮಾಡಿಕೊಂಡಾಗ ಕ್ಲಬ್ ಮುನ್ನಡೆಗೆ ಹಿನ್ನಡೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ಹೊಸ ಕ್ಲಬ್ ನಲ್ಲಿನ ಸದಸ್ಯರ ಉತ್ಸುಕತೆಯ ಮೂಲಕ ನಾಯಕತ್ವವನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು.
ಒಂದೇ ಮನಸ್ಸು, ಹೃದಯದ ಸೇವೆಯ ಪರಂಪರೆ ಮುಂದುವರೆಸೋಣ-ವಿಲ್ಮಾ ಗೊನ್ಸಾಲ್ವಿಸ್
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಲು ಸದಸ್ಯರ ಸಹಕಾರವೇ ಕಾರಣ. ನಮ್ಮ ಈ ಕ್ಲಬ್ ಹುಟ್ಟಿಗೆ ಕಾರಣವಾದ ಲ್ಯಾನ್ಸಿ ಮಸ್ಕರೇನ್ಹಸ್ ರವರು ಉತ್ತಮ ನಿರ್ದೇಶನ ನೀಡಿರುತ್ತಾರೆ. ವರ್ಷವಿಡೀ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದ ತೃಪ್ತಿ ನನಗಿದೆ. ಈಗಾಗಲೇ ನಾವೆಲ್ಲಾ ಒಂದೇ ಮನಸ್ಸು, ಹೃದಯದಿಂದ ಸೇವೆ ನೀಡುತ್ತಾ ಬಂದಿದ್ದು ಮುಂದಿನ ವರ್ಷ ಕೂಡ ಈ ಪರಂಪರೆಯನ್ನು ಮುಂದುವರೆಸೋಣ ಎಂದರು.
ನೂತನ ಸದಸ್ಯೆ ಸೇರ್ಪಡೆ:
ಕ್ಲಬ್ ನೂತನ ಅಧ್ಯಕ್ಷ ಅಂತೋನಿ ಒಲಿವೆರಾರವರ ಪತ್ನಿ ಮೋನಿಕಾ ಪಿ. ಮಾಡ್ತಾರವರು ಕ್ಲಬ್ ನೂತನ ಸದಸ್ಯೆಯಾಗಿ ಸೇರ್ಪಡೆಗೊಂಡಿದ್ದು, ಕ್ಲಬ್ ಸದಸ್ಯೆ ಪ್ರಿಯಲತಾ ಡಿ’ಸಿಲ್ವರವರು ನೂತನ ಸದಸ್ಯೆಯ ಪರಿಚಯ ಮಾಡಿದರು.
ಸೇವಾ ಕೊಡುಗೆ:
ಗಂಡ ತೀರಿಕೊಂಡಿದ್ದು ಮನೆಯ ನಿರ್ವಹಣೆಗೆ ದೈನಂದಿನ ಮನೆ ಕೆಲಸ ಮಾಡುವ ಮೂಲಕ ಜೀವನ ನಿರ್ವಹಿಸುವ ಬ್ರಹ್ಮನಗರ ದಿ.ತನಿಯಪ್ಪರವರ ಪತ್ನಿ ವಸಂತಿರವರಿಗೆ ಸಹಾಯಧನದ ಚೆಕ್ ಅನ್ನು ಹಾಗೂ ಸಿಯೋನಾಶ್ರಮದ ಖರ್ಚು ವೆಚ್ಚಗಳಿಗೆ ಸುಮಾರು ರೂ.16 ಸಾವಿರದ ದಿನಸಿ ಸಾಮಾಗ್ರಿಗೆ ಚೆಕ್ ಅನ್ನು ಫ್ಲೋರಿನ್ ಡಿ’ಸೋಜರವರಿಗೆ ಅಧ್ಯಕ್ಷ ಅಂತೋನಿ ಒಲಿವೆರಾರವರು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಲಕ್ಕಿ ಲಯನ್ಸ್ ಸ್ಪರ್ಧೆ:
ಈ ಸಂದರ್ಭದಲ್ಲಿ ಕ್ಲಬ್ ಲಕ್ಕಿ ಲಯನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರಲ್ಲಿ ಅಧ್ಯಕ್ಷ ಅಂತೋನಿ ಒಲಿವೆರಾರವರ ಅಳಿಯ ರೋಲ್ಸನ್ ಡಿ’ಕುನ್ಹಾ, ಲಯನ್ಸ್ ಕ್ಲಬ್ ಪುತ್ತೂರು ಕಾವು ಕ್ಲಬ್ ಅಧ್ಯಕ್ಷ ಜಗನ್ನಾಥ್ ರೈ ಗುತ್ತುರವರು ಲಕ್ಕಿ ಲಯನ್ಸ್ಗಳಾಗಿ ಆಯ್ಕೆಯಾಗಿದ್ದು ಅವರುಗಳನ್ನು ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ಕೇಕ್ ಕತ್ತರಿಸುವಿಕೆ:
ಜೂನ್ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಕ್ಲಬ್ನ ಲ್ಯಾನ್ಸಿ ಮಸ್ಕರೇನ್ಹಸ್, ನಿಶಾ ಮಿನೇಜಸ್, ಐವಾನ್ ಫೆರ್ನಾಂಡೀಸ್ರವರುಗಳು ಜೊತೆಗೂಡಿ ಸಿಹಿಯ ಪ್ರತೀಕವಾದ ಕೇಕ್ ಅನ್ನು ಕತ್ತರಿಸಿ ಪರಸ್ಪರ ತಿನ್ನಿಸಿ ಎಲ್ಲರಿಗೂ ಹಂಚಲಾಯಿತು.
ಲೀನಾ ರೇಗೊ ಹಾಗೂ ನಿಶಾ ಮಿನೇಜಸ್ರವರು ಪ್ರಾರ್ಥಿಸಿದರು. ಅನಿತಾ ಡಿ’ಸೋಜರವರು ಧ್ವಜವಂದನೆಯನ್ನು, ಲಯನ್ ನೀತಿ ಸಂಹಿತೆಯನ್ನು ಮೋಲಿ ಪಿಂಟೊರವರು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಿರ್ಗಮಿತ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ನಿರ್ಗಮಿತ ಹಾಗೂ ಹಾಲಿ ಕಾರ್ಯದರ್ಶಿ ಲೀನಾ ಮಚಾದೋ ವಂದಿಸಿದರು. ಪದಪ್ರದಾನ ಅಧಿಕಾರಿಯ ಪರಿಚಯವನ್ನು ಕೋಶಾಧಿಕಾರಿ ವಿಕ್ಟರ್ ನಿಶಾ ಮಿನೇಜಸ್, ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಜೊತೆ ಕಾರ್ಯದರ್ಶಿ ಮೋಲಿಶರೋನ್ ಡಿ’ಸೋಜ, ನೂತನ ಅಧ್ಯಕ್ಷರ ಪರಿಚಯವನ್ನು ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ನೂತನ ಕಾರ್ಯದರ್ಶಿ, ಕೋಶಾಧಿಕಾರಿಯವರ ಪರಿಚಯವನ್ನು ಲೀನಾ ರೇಗೊರವರು ನೀಡಿದರು. ನಿಶಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಪದ ಪ್ರದಾನ
ಕ್ಲಬ್ ನೂತನ ಅಧ್ಯಕ್ಷ ಅಂತೋನಿ ಒಲಿವೆರಾ, ಕಾರ್ಯದರ್ಶಿ ಲೀನಾ ಮಚಾದೊ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಪ್ರಥಮ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ದ್ವಿತೀಯ ಉಪಾಧ್ಯಕ್ಷ ಪಿಂಟೊ, ಜೊತೆ ಕೋಶಾಧಿಕಾರಿ ಅನಿತಾ ಜ್ಯೋತಿ ಡಿ’ಸೋಜ, ಮೆಂಬರ್ಶಿಪ್ ಚೇರ್ಮ್ಯಾನ್ ಐವಾನ್ ಫೆರ್ನಾಂಡೀಸ್, ಸರ್ವಿಸ್ ಚೇರ್ಮ್ಯಾನ್ ಲೀನಾ ರೇಗೊ, ಮಾರ್ಕೆಟಿಂಗ್ ಚೇರ್ಮ್ಯಾನ್ ಬೆಂಜಮಿನ್ ಡಿ’ಸೋಜ, ಟೇಯ್ಲ್ ಟ್ವಿಸ್ಟರ್ ಲಿಲ್ಲಿ ಎವ್ಲಿನ್ ಡಿ’ಸೋಜ, ಫಂಡ್ ರೈಸ್ ಚೇರ್ಪರ್ಸನ್ ಪ್ರಿಯಲತಾ ಡಿ’ಸಿಲ್ವ, ಮಾಹಿತಿ ತಂತ್ರಜ್ಞಾನ ಐರಿನ್ ಡಿಸೋಜರವರಿಗೆ ಪದಪ್ರದಾನ ಅಧಿಕಾರಿ ಡಾ.ಮೆಲ್ವಿನ್ ಡಿ’ಸೋಜರವರು ಪದಪ್ರದಾನವನ್ನು ನೆರವೇರಿಸಿದರು.
ಸನ್ಮಾನ
2024-25ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅಧ್ಯಕ್ಷ ಅಂತೋನಿ ಒಲಿವೆರಾ ಹಾಗೂ ಮೋನಿಕಾ ಮಾಡ್ತಾರವರ ಪುತ್ರಿ ಅಂಜಲಿ ಒಲಿವೆರಾ(600 ಅಂಕ) ಮತ್ತು ಸಿದ್ಯಾಲ ಜೋನ್ ಪಾಯಿಸ್ ಹಾಗೂ ಸುನೀತಾ ಪಾಯಿಸ್ರವರ ಪುತ್ರಿ ಜೊಸ್ವಿಟಾ ಪಾಯಿಸ್(605 ಅಂಕ), ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿದ ಪದ ಪ್ರದಾನ ಅಧಿಕಾರಿ, ಮಾಜಿ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜ, ಕಳೆದ ವರ್ಷ ಕ್ಲಬ್ ಅನ್ನು ಉತ್ತಮವಾಗಿ ಮುನ್ನಡೆಸಿದ ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ರವರುಗಳನ್ನು ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಟೀಮ್ ವರ್ಕ್ನಿಂದ ಕ್ಲಬ್ ಬೆಳಗಿಸೋಣ
ವರ್ಷದ ಹಿಂದೆ ಆರಂಭಗೊಂಡ ಈ ಕ್ಲಬ್ಗೆ ಕಾಲಕಾಲಕ್ಕೆ ನೀರನ್ನು ಚಿಮುಕಿಸುತ್ತಾ, ಸದಸ್ಯರು ಒಟ್ಟಾಗಿ ಹೆಜ್ಜೆ ಇಡುವ ಮೂಲಕ ಕ್ಲಬ್ ಹೆಸರು ಗಳಿಸಿದೆ. ಕ್ಲಬ್ನಲ್ಲಿನ ಹಿರಿಯರು ಕೂಡ ನಮ್ಮೊಂದಿಗೆ ಬೆನ್ನೆಲುಬಾಗಿ ನಿಂತಿದ್ದು ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಮ್ಮಲ್ಲಿನ ಅಡಿಪಾಯಯನ್ನು ಗಟ್ಟಿ ಮಾಡಿಕೊಂಡು, ಟೀಮ್ ವರ್ಕ್ ಮೂಲಕ ಕ್ಲಬ್ ಅನ್ನು ಬೆಳಗಿಸೋಣ.
-ಅಂತೋನಿ ಒಲಿವೆರಾ, ನೂತನ ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್